ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಈಶ್ವರಲಿಂಗ ಮೈದಾನದಿಂದ ಎಂ ಎಂ ಬಂಗ್ಲೆಯವರೆಗೂ ಪಾದಯಾತ್ರೆ ಮಾಡುವುದರ ಮುಖಾಂತರ ವಕ್ಫ್ ಬೋರ್ಡ್ ರದ್ದುಪಡಿಸಿ ಮತ್ತು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತು.
ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಮಂಗಳವಾರ ರಂದು ತಾಲೂಕಿನ ದಾದ್ಯಂತ ಪ್ರತಿಭಟನೆ ಬಿಜೆಪಿ ಪ್ರೊಟೆಸ್ಟ್ ನಡೆಸಿದ್ದು.ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆ ಕುರಿತು ಸಿಬಿಐ ತನಿಖೆ ನಡೆಸಬೇಕು ಮತ್ತು ವಿವಾದಕ್ಕೆ ಕಾರಣವಾದ ಸಚಿವ ಜಮೀರ್ ಅಹ್ಮದ್ ಖಾನ್ ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಬಿಜೆಪಿಯ ಆಗ್ರಹಿಸಿದರು.
ಇದೇ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ನಗರಸಭಾ ಸದಸ್ಯರ ಸಂಜಯ ತೆಗ್ಗಿ ಲವ್ ಜಿಹಾದ್ ಮಾಡಿ ಹಿಂದೂ ಹೆಣ್ಮಕ್ಕಳನ್ನ ಮತಾಂತರ ಮಾಡಿಯಾಯ್ತು.ಈಗ ಲ್ಯಾಂಡ್ ಜಿಹಾದ್ ಮೂಲಕ ರೈತರ ಜಮೀನನ್ನು ಕನ್ವರ್ಷನ್ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು.
ರಾಜ್ಯ ಸರ್ಕಾರ ಅನ್ನದಾತರ ತಲೆ ಮೇಲೆ ಚಪ್ಪಡಿಕಲ್ಲು ಎಳೆದಿದೆ. ಜಮೀರ್ ರೈತರ ಜಮೀನು ಕಬಳಿಕೆಗೆ ಮುಂದಾಗಿದ್ದಾರೆ. ರೈತರ ಜಮೀನು ಕಬಳಿಸಲು ಹುನ್ನಾರ ನಡೆದಿದೆ. 1974 ರಲ್ಲಿ ಆವತ್ತಿನ ಕಾಂಗ್ರೆಸ್ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ, ಇದು ರದ್ದಾಗಬೇಕು ಎಂದು ಆಗ್ರಹಿಸಿದ್ದಾರೆ.
ಈ ನೋಟಿಫಿಕೇಷನ್ ಮುಸಲ್ಮಾನರ ಓಲೈಕೆಗಾಗಿ ಮಾಡಲಾಗಿದೆ.ರೈತರ ಭೂಮಿ, ಶಾಲೆ, ದೇವಸ್ಥಾನ, ಮಠಗಳನ್ನು ವಕ್ಫ್ ಜಾಗ ಅಂತ ಮಾಡಿದ್ದಾರೆ. ಇದು ತುಘಲಕ್ ಸರ್ಕಾರ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಪದೇ ಪದೇ ವೋಟ್ ರಾಜಕೀಯಕ್ಕಾಗಿ ಕರ್ನಾಟಕವನ್ನ ಹಾಳು ಮಾಡ್ತಿದ್ದಾರೆ. ಇವರನ್ನು ಯಾರೂ ನಂಬಲ್ಲ.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದರೆಪ್ಪ ಉಳ್ಳಾಗಡ್ಡಿ. ಸುರೇಶ ಅಕ್ಕಿವಾಟ. ವಿದ್ಯಾಧರ ಸವದಿ. ಆನಂದ ಕಂಪು. ಶ್ರೀಶೈಲ ಬಿಳಗಿ. ಶ್ರೀಮತಿ ವಿದ್ಯಾ ದವಾಡಿ ನಗರ ಸಭೆ ಅಧ್ಯಕ್ಷರು. ಮಾತೇಂಶ ಹಿಟಿನಮಠ. ಬಸವಗೌಡಾ ಪಾಟೀಲ. ನಂದು ಗಾಯಕವಾಡ. ಶಂಕರ ಹುನ್ನೊರ. ಶ್ರೀಶೈಲ ಯಾದವಾಡ. ಶಂಕೆರೇಪ್ಪಾ ಬುಜರುಕ. ಸುನಿಲ್ ವಜ್ರಮಟಿ. ಬಸವರಾಜ ತೇಗಿ. ಮನೋಹರ್ ಶಿರೋಳ. ಅರುಣ್ ಬುದ್ಧಿ. ಪರಶುರಾಮ ಬಸವಗೋಳ. ಪವಿತ್ರಾ ತುಕನ್ನವರ. ಅನುರಾಧ ಹೋರಟಿ. ಗೌರಿ ಮೀಳಿ. ವೈಷ್ಣವಿ ಬಾಗೇವಾಡಿ. ಸವಿತಾ ಹೋಸುರ ಸೇರಿದಂತೆ ತೀರ್ಥ ಮತಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ರೈತರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ