ಗದಗ: ರೈತರ ಜಮೀನು, ದೇವಾಲಯ ಹಾಗೂ ಮಠ-ಮಾನ್ಯಗಳ ಆಸ್ತಿಗಳ ಮೇಲೆ ವಕ್ಷ ಬೋರ್ಡ್ ಹೆಸರು ದಾಖಲಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಗಜೇಂದ್ರಗಡ ಪಟ್ಟಣದಲ್ಲಿ ಬಿಜೆಪಿ ಕರೆ ನೀಡಿದ್ದ ಪ್ರತಿಭಟನೆ ವೇಳೆ ಮಾಜಿ ಸಚಿವ ಕಳಕಪ್ಪ ಬಂಡಿ ಮನವಿ ಸ್ವೀಕರಿಸಲು ತಹಶೀಲ್ದಾರ್ ತಡವಾಗಿ ಬಂದರು ಅಂತಾ ಗಜೇಂದ್ರಗಡ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿಗೆ ಸಾರ್ವಜನಿಕರ ಎದುರಿಗೆ ನೀನು, ಈ ಸರ್ಕಾರ ಸೂರ್ಯ ಚಂದ್ರ ಇರೋವರೆಗೂ ಇರ್ತಿಯಾ ತಾಲೂಕಾ ಮೆಜಿಸ್ಟ್ರೇಟ್ ಇದ್ದೀಯಾ, ಕಾಮನ್ಸೆನ್ಸ್ ಇಲ್ವಾ, ದುಡ್ಡು ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಳ್ಳಿರಿ,
Dolo 650: ಸಣ್ಣ-ಪುಟ್ಟ ರೋಗಕ್ಕೆಲ್ಲಾ “ಡೋಲೋ 650” ಮಾತ್ರೆ ನುಂಗುವ ಮುನ್ನ ಎಚ್ಚರ! ಈ ಸ್ಟೋರಿ ನೋಡಿ
ಜನರಿಂದ ದುಡ್ಡು ತೆಗೆದುಕೊಳ್ಳೋದೇ ನಿಮ್ಮ ಕೆಲಸ, ರೈತರ ಪ್ರತಿಭಟನೆ ಅಂದ್ರೆ ಬೆಲೆ ಇಲ್ವಾ ಅಂತಾ ಏಕವಚನದಲ್ಲೇ ಮಾತನಾಡಿ ನಿಂದಿಸಿದ್ರು. ಆ ಹಿನ್ನೆಲೆ ಇಂದು ಕರ್ನಾಟಕ ಸರಕಾರಿ ಕಂದಾಯ ನೌಕರರ ಸಂಘದ ಗದಗ ಜಿಲ್ಲಾ ಘಟಕದಿಂದ ಗದಗ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ಮಾಡಿ ಅಧಿಕಾರಿಗಳು ಹಾಗೂ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಿ ತಪ್ಪಿತಸ್ಥರ ವಿರುಧ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು.