ಬೆಂಗಳೂರು:- ಫ್ಯಾಷನ್ ಡಿಸೈನರ್ ಸಂಧ್ಯಾ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೇಸ್ ವಾಪಸ್ ಪಡೆಯಲು ಆರೋಪಿಯಿಂದ ಹಣದ ಆಮೀಷ ಒಡ್ಡಲಾಗಿದೆ.
ಎಸ್, ಕೆಂಗೇರಿ ಬಸ್ ನಿಲ್ದಾಣದ ಬಳಿ ಬೆಂಜ್ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮಹಿಳೆಯೊಬ್ಬರು ಸಾವನ್ನಪ್ಪಿದರು. ಫ್ಯಾಷನ್ ಡಿಸೈನರ್ ಆಗಿರುವ ಸಂಧ್ಯಾ ಅವರು ಬಟ್ಟೆ ಅಂಗಡಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಶನಿವಾರ ಕೆಲಸ ಮುಗಿಸಿ ರಾತ್ರಿ 7 ಗಂಟೆ ಸುಮಾರಿಗೆ ಕೆಂಗೇರಿ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದರು.
ದರ್ಶನ್ ಪ್ರಕರಣ ಹೋಲುವ ರೀತಿ ಎಪಿಸೋಡ್: ಕನ್ನಡದ ಮತ್ತೊಂದು ಜನಪ್ರಿಯ ಧಾರಾವಾಹಿಯಲ್ಲಿ ಶೆಡ್ ಬಗ್ಗೆ ಉಲ್ಲೇಖ!
ಈ ವೇಳೆ ಮದ್ಯದ ಮತ್ತಿನಲ್ಲಿ ಬೆಂಜ್ ಕಾರು ಚಲಾಯಿಸಿಕೊಂಡು ಬಂದ ಯುವಕ, ಸಂಧ್ಯಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ಸಂಧ್ಯಾ ಅವರನ್ನು 5 ಮೀಟರ್ ಉಜ್ಜಿಕೊಂಡು ಹೋಗಿದೆ. ಅಪಘಾತದ ರಭಸಕ್ಕೆ ಸಂಧ್ಯಾ ತಲೆಗೆ ತೀವ್ರ ಪೆಟ್ಟಾಗಿ, ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಅಪಘಾತದ ಬಳಿಕ ಯುವಕ ಪರಾರಿಯಾಗಲು ಯತ್ನಿಸಿದ್ದಾನೆ. ಆಗ, ಸ್ಥಳೀಯರು ಯುವಕನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಆರೋಪಿ ಕಡೆಯಿಂದ ಯಾರೊ ಒಬ್ಬರು ಗನ್ ಮೆನ್ ರೀತಿ ಇರುವವರು ನಮ್ಮ ಅಣ್ಣನ ಬಳಿ ಬಂದು ಹಣಕ್ಕೆ ಆಮೀಷ ಒಡ್ಡಿದ್ದಾರೆ. ಕೇಸ್ ಏನು ಬೇಡ, ಎಫ್ಐಆರ್ ಬೇಡ ನಾವು ಒಂದುವರೆ ಕೋಟಿ ಕೊಡುತ್ತೇವೆ ಎಂದು ಹೇಳಿದ್ದಾರಂತೆ. ಆದರೆ ನಮಗೆ ಹಣ ಏನು ಬೇಡ. ನಮಗೆ ನಮ್ಮ ಅಕ್ಕನ ಸಾವಿಗೆ ನ್ಯಾಯ ಬೇಕು. ಹಣ ಮುಖ್ಯ ಅಲ್ಲ ಅಕ್ಕನ ಜೀವ ಮುಖ್ಯ. ನಾವು ಕಾನೂನು ಮೂಲಕ ಹೋರಾಟ ಮಾಡುತ್ತೇವೆ ಎಂದು ಸಂಧ್ಯಾ ಸಹೋದರ ಹೇಳಿದರು.
ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ದಯಾನಂದ ಮಾತನಾಡಿ, ಕೆಂಗೇರಿ ಬಸ್ ನಿಲ್ದಾಣದ ಮುಂದೆ ಬೆಂಜ್ ಕಾರು ಡಿಕ್ಕಿಯಾಗಿ 30 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಘಟನೆ ಬಳಿಕ ಕೇಸ್ ದಾಖಲು ಮಾಡಿ ಆರೋಪಿಯನ್ನು ಬಂಧಿಸಿದ್ದೇವೆ. ಡ್ರಂಕ್ & ಡ್ರೈವ್ ಮತ್ತು ರಕ್ತ ಪರೀಕ್ಷೆ ಮಾಡಿಸಲಾಗಿದೆ. ‘ಉದ್ದೇಶಪೂರ್ವಕವಲ್ಲದ ಕೊಲೆ’ ಎಂದು ಕೇಸ್ ದಾಖಲಾಗಿದೆ ಎಂದಿದ್ದಾರೆ.