ಬೆಂಗಳೂರು:- ಡೈರೆಕ್ಟರ್ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಅಂಶಗಳು ಬೆಳಕಿಗೆ ಬರುತ್ತಿದೆ.
ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನ, ಬೆಳ್ಳಿ ಬೆಲೆ ಎರಡೂ ಇಳಿಕೆ!
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಮಾದನಾಯಕನಹಳ್ಳಿ ಪೊಲೀಸರಿಗೆ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರುವುದು ಗೊತ್ತಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನಿರ್ಧರಿಸಿದ್ದ ಗುರುಪ್ರಸಾದ್, ಹೊಸದಾಗಿ ಹಗ್ಗ ಖರೀದಿ ಮಾಡಿದ್ದರಂತೆ. ಹಾಗೇ ಹಗ್ಗ ಖರೀದಿ ಮಾಡಿಕೊಂಡು ಮನೆಗೆ ಬಂದು ಕಿಟಕಿಯಿಂದ ಹೊರಗೆ ಯಾರಿಗೂ ಕಾಣಬಾರದು ಎಂದು ಹೊಸದಾಗಿ ಕರ್ಟನ್ಗಳು ಹಾಕಿ ಕವರ್ ಮಾಡಿದ್ದಾರೆ. ನಂತರ ಮನೆಯ ಬಾಗಿಲಿನ ಒಳಗಿನಿಂದಲೇ ಚಿಲಕ ಹಾಕಿ ಅಲ್ಲೇ ಇದ್ದ ದಿವಾನ್ ಮೇಲಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಅನ್ನುವುದು ತನಿಖೆ ವೇಳೆ ಬಹಿರಂಗವಾಗಿದೆ
ಗುರುಪ್ರಸಾದ್ ಆತ್ಮಹತ್ಯೆಗೆ ಆರ್ಥಿಕ ಕಾರಣಗಳೇನಾದರು ಇದೆಯಾ ಅಥವಾ ವೈಯಕ್ತಿಕ ಕಾರಣಗಳಾ ಅನ್ನುವ ವಿಚಾರಕ್ಕೂ ತನಿಖೆ ನಡೆಯುತ್ತಿದೆ. ಅದರ ಜೊತೆಗೆ ಆತ್ಮಹತ್ಯೆ ನಡೆದಿದ್ದು ಯಾವಾಗ ಅನ್ನುವುದಕ್ಕೂ ಉತ್ತರ ಸಿಕ್ಕಿದೆ. ಗುರುಪ್ರಸಾದ್, ಕಳೆದ ಅ.29ರಂದು ಕೊನೆಯ ಬಾರಿಗೆ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಆ ನಂತರ ಯಾರ ಸಂಪರ್ಕಕ್ಕೂ ಸಿಗಲಿಲ್ಲ. ಫ್ಲಾಟ್ಗೆ ಅ.29ರಂದು ಸಂಜೆ ಹೋಗಿರುವುದನ್ನು ಅಲ್ಲಿನ ಕೆಲವರು ನೋಡಿದ್ದಾರೆ. ಪೊಲೀಸರ ತನಿಖೆ ವೇಳೆಯೂ, ಗುರುಪ್ರಸಾದ್ ಅ.29ರ ರಾತ್ರಿ 7-8 ಗಂಟೆ ಹೊತ್ತಿನಲ್ಲಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.
ಈ ನಡುವೆ, ಗುರುಪ್ರಸಾದ್ ನಾಲ್ಕು ಮೊಬೈಲ್ಗಳನ್ನು ಬಳಸುತ್ತಿದ್ದರು ಎನ್ನಲಾಗಿದ್ದು, ಆ ನಾಲ್ಕು ಮೊಬೈಲ್ಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.