ಸೂರ್ಯನ ಕಿರಣಗಳಿಗೆ ನಿಮ್ಮ ಚರ್ಮ ಒಡ್ಡಿಕೊಂಡರೆ ಸನ್ ಟ್ಯಾನ್ ಆಗುವುದು ಖಚಿತ. ಸೂರ್ಯನ ನೇರಳಾತೀತ ಕಿರಣಗಳು ನಿಮ್ಮ ಚರ್ಮವನ್ನು ನೇರವಾಗಿ ಸ್ಪರ್ಶಿಸುವುದರಿಂದ ಸನ್ ಟ್ಯಾನ್, ಸನ್ ಬರ್ನ್ನಂತಹ ಸಮಸ್ಯೆಗಳು ಉಂಟಾಗುತ್ತದೆ. ನಿಮ್ಮ ಮುಖ, ತೋಳುಗಳು, ಕೈಗಳು, ಕುತ್ತಿಗೆ, ಬೆನ್ನು ಮತ್ತು ಪಾದಗಳು ಸನ್ ಟ್ಯಾನ್ಗೆ ಒಳಗಾಗುತ್ತವೆ. ಟ್ಯಾನ್ ಹೋಗಲಾಡಿಸಲು ಕೆಲವು ಮನೆಮದ್ದು ಇಲ್ಲಿವೆ ನೋಡಿ..
Mahadevappa: ಭಾವನಾತ್ಮಕ ವಿಷಯಗಳ ಮೇಲೆ ಬಿಜೆಪಿ ಪ್ರತಿಭಟನೆ: ಮಹದೇವಪ್ಪ ವ್ಯಂಗ್ಯ!
ನಿಂಬೆ ರಸ ಮತ್ತು ಜೇನುತುಪ್ಪ
ನಿಂಬೆ ರಸ ಮತ್ತು ಜೇನುತುಪ್ಪ: ಒಂದು ಪಾತ್ರೆಯಲ್ಲಿ ಜೇನುತುಪ್ಪ ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ. ಒಂದಿಷ್ಟು ಹೊತ್ತು ಬಿಟ್ಟು ತೊಳೆಯಿರಿ.
ಮೊಸರು ಮತ್ತು ಕಡಲೆ ಹಿಟ್ಟು
ಮೊಸರು ಮತ್ತು ಕಡಲೆ ಹಿಟ್ಟನ್ನು ಬೆರೆಸಿ ಮುಖಕ್ಕೆ ಹಚ್ಚಿ. ಒಣಗಿದ ನಂತರ ತೊಳೆಯಿರಿ. ಇದರಿಂದ ಮುಖ ಮೃದುವಾಗುತ್ತದೆ ಜೊತೆಗೆ ಹೊಳೆಯುತ್ತದೆ.
ಟೊಮೆಟೊ: ಟೊಮೆಟೊವನ್ನು ಜಜ್ಜಿ ರಸ ತೆಗೆದು ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ತೊಳೆಯಿರಿ.
ಅಲೋವೆರಾ: ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ.
ಕಡಲೆ ಹಿಟ್ಟು ಮತ್ತು ಅರಿಶಿನ: ಕಡಲೆ ಹಿಟ್ಟು ಮತ್ತು ಅರಿಶಿನವನ್ನು ಬೆರೆಸಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ.
ಆಪಲ್ ಸೈಡರ್ ವಿನೆಗರ್: ನೀರಿಗೆ ಆಪಲ್ ಸೈಡರ್ ವಿನೆಗರ್ ಬೆರೆಸಿ ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ.
ಮೊಸರು ಮತ್ತು ಅರಿಶಿನ: ಮೊಸರು ಮತ್ತು ಅರಿಶಿನವನ್ನು ಬೆರೆಸಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ.
ಸೌತೆಕಾಯಿ ಮತ್ತು ನಿಂಬೆ ರಸ: ಸೌತೆಕಾಯಿ ರಸ ಮತ್ತು ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ.
ಮಸೂರ ದಾಲ್: ಮಸೂರ ದಾಲ್ ಅನ್ನು ನುಣ್ಣಗೆ ರುಬ್ಬಿ ಸ್ವಲ್ಪ ಹಾಲು ಬೆರೆಸಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ.
ಹಾಲು ಮತ್ತು ಗಂಧವನ್ನು ಅರೆದು ಹಚ್ಚುವುದರಿಂದಲೂ ಮುಖ ಹೊಳೆಯುತ್ತದೆ.