ದೇವರನ್ನು ತೋರಿಸುವ ಶಕ್ತಿ ದೀಪಕ್ಕೆ ಇದೆ ದೀಪದಿಂದ ಶಾಂತಿ ಆರೋಗ್ಯ ಕಲ್ಯಾಣ ವಾಗುತ್ತದೆ. ಎಲ್ಲ ಶರಣರು ದೀಪವನ್ನು ಗೌರವಿಸಿದ್ದಾರೆ .ಶರಣರು ಹೇಳಿದಂತೆ ನಮ್ಮಲ್ಲಿರುವ ಕತ್ತಲೆಯನ್ನು ಹೋಗಲಾಡಿಸಲು ದೀಪದ ಅವಶ್ಯಕತೆ. ಇದೆ .
ದೀಪಾವಳಿ ಸಂದರ್ಭದಲ್ಲಿ ದೀಪಕ್ಕೆ ಹೆಚ್ಚು ಪ್ರಾಧಾನ್ಯತೆ ಇದೆ ಅಜ್ಞಾನವನು ಕಳೆದು ಸುಜ್ಞಾನವನ್ನು ದೀಪ ಹಚ್ಚುವುದರ ಮೂಲಕ ಪಡೆಯುವುದೇ ಈ ಬೆಳಕಿನ ಹಬ್ಬ ದೀಪಾವಳಿಯ ಉದ್ದೇಶವಾಗಿದೆ ಎಂದು ರಬಕವಿಯ ಶ್ರೀ ಗುರುದೇವ ಬ್ರಹ್ಮಾನಂದ ಮಠದ ಪೂಜ್ಯಶ್ರೀ ಗುರುಸಿದ್ದೇಶ್ವರ ಸ್ವಾಮೀಜಿಯವರು ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಗಟ್ಟಿಗಿ ಬಸವೇಶ್ವರ ರಥೋತ್ಸವದ ಅಂಗವಾಗಿ ಪ್ರಾರಂಭವಾದ ಪ್ರವಚನ ಕಾರ್ಯಕ್ರಮದಲ್ಲಿ ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ