ಕೋಲಾರ: ಕೋಲಾರ ತಾಲ್ಲೂಕು ವೇಮಗಲ್ ಗ್ರಾಮದಲ್ಲಿ ಇದೇ ತಿಂಗಳ 10 ರಂದು 8 ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ಬಡವ್ರ ಮಕ್ಳೂ ಬೆಳೀ ಬೇಕು ಕಣ್ರಯ್ಯ ಕನ್ನಡ ಚಲನ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಚಿತ್ರದ ನಿರ್ಮಾಪಕರಾದ ಸಿ.ಎಸ್.ವೆಂಕಟೇಶ್ ತಿಳಿಸಿದರು.
ಚಿತ್ರದ ಟೀಸರ್ ಬಿಡುಗಡೆ ಕುರಿತು ಕೋಲಾರದ ವೇಮಗಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಳೆದ ವರ್ಷಗಳಂತೆ ಈ ಬಾರಿಯೂ ವೇಮಗಲ್ ಗ್ರಾಮದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ.
ಬೆಳ್ಳಿಗೆ 9 ಗಂಟೆಗೆ ಬಸ್ ನಿಲ್ದಾಣದಲ್ಲಿ ಕನ್ನಡ ಧ್ವಜಾರೋಹಣ ನೇರವೇರಿಸಿ ಭುವನೇಶ್ವರಿ ದೇವಿಗೆ ಪೂಜೆ ಮತ್ತು ವಿಶೇಷ ಅಲಂಕಾರಗೊಂಡ ಆಟೋಗಳು ಹಾಗೂ ವಿವಿಧ ಕಲಾತಂಡಗಳಿಂದ ಮೆರವಣಿಗೆ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಬಡವ್ರ ಮಕ್ಳೂ ಬೆಳೀ ಬೇಕು ಕಣ್ರಯ್ಯ ಕನ್ನಡ ಚಲನ ಚಿತ್ರದ ಟೀಸರ್ ಬಿಡುಗಡೆ ಸಮಾರಂಭವನ್ನು ವೇಮಗಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.