ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಸ್ಪಿನ್ನರ್ಗಳ ಮುಂದೆ ಟೀಮ್ ಇಂಡಿಯಾದ ವೀರಾಧಿವೀರರು ಮಕಾಡೆ ಮಲಗಿದ್ದಾರೆ.
ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಎಡಗೈ ಸ್ಪಿನ್ನರ್ಗಳು!
ನ್ಯೂಜಿಲೆಂಡ್ ಪ್ರವಾಸದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯನ್ ಬ್ಯಾಟರ್ಸ್ ಸಾಮರ್ಥ್ಯ ಪೇಸ್ ಅಟ್ಯಾಕ್ ಎದುರು ಬಟಾಬಯಲಾಗಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ಸೋಲುಂಡ ಬಳಿಕ ಪುಣೆ ಹಾಗೂ ವಾಂಖೆಡೆ ಪಿಚ್ನಲ್ಲೇ ಹೊಸ ಗೇಮ್ ಆಡಿದ ಟೀಮ್ ಮ್ಯಾನೇಜ್ಮೆಂಟ್ ಸ್ಪಿನ್ ಟ್ರ್ಯಾಕ್ ಮೊರೆ ಹೋಗಿತ್ತು. ಅಂತಿಮವಾಗಿ ತಾವೇ ತೋಡಿದ ಹಳ್ಳಕ್ಕೆ ಟೀಮ್ ಇಂಡಿಯಾ ಬಿತ್ತು.
ಪೇಸ್ ಟ್ರ್ಯಾಕ್ನಲ್ಲಿ ಮುಗ್ಗರಿಸಿದ್ದ ಟೀಮ್ ಇಂಡಿಯಾ 2 ಮತ್ತು 3ನೇ ಟೆಸ್ಟ್ನಲ್ಲಿ ಸ್ಪಿನ್ ಟ್ರ್ಯಾಕ್ ನಿರ್ಮಿಸಿ ಕಣಕ್ಕಿಳಿಯಿತು. ಆದ್ರೆ, ತಾವೇ ತೋಡಿದ ಹಳ್ಳಕ್ಕೆ ಟೀಮ್ ಇಂಡಿಯಾ ಆಟಗಾರರು ಬಿದ್ರು. ಪುಣೆಯಲ್ಲಿ ನಡೆದ 2ನೇ ಟೆಸ್ಟ್ನಲ್ಲಿ ಎರಡೂ ಇನ್ನಿಂಗ್ಸ್ ಸೇರಿ 18 ವಿಕೆಟ್ಗಳನ್ನ ಟೀಮ್ ಇಂಡಿಯಾ ಕಳೆದುಕೊಳ್ತು. ಇನ್ನು, ಮುಂಬೈನಲ್ಲೂ 16 ವಿಕೆಟ್ಗಳನ್ನ ಸ್ಪಿನ್ನರ್ಗಳಿಗೆ ಟೀಮ್ ಇಂಡಿಯಾ ಬ್ಯಾಟರ್ಸ್ ಒಪ್ಪಿಸಿದ್ರು.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಫ್ಲಾಪ್ ಆದ ಬೆನ್ನಲ್ಲೇ, ಹೀಗೊಂದು ಚರ್ಚೆ ಶುರುವಾಗಿದೆ. ಹಲವು ದಶಕಗಳಿಂದ ಇದ್ದ ಸ್ಪಿನ್ ಟೀಮ್ ಇಂಡಿಯಾದ ಸ್ಟ್ರೇಂಥ್ ಅನ್ನೋ ಮಾತು ಸದ್ಯ ಸುಳ್ಳಾಗಿದೆ. ಸ್ಪಿನ್ ಎದುರು ಟೀಮ್ ಇಂಡಿಯಾದ ಪಾರಮ್ಯಕ್ಕೆ ಫುಲ್ ಸ್ಟಾಫ್ ಬೀಳೋ ದಿನಗಳ ಹತ್ತಿರಬಂದಂತಿದೆ. ಹೀಗೆ ಹೇಳ್ತಿರೋದಕ್ಕೆ ನ್ಯೂಜಿಲೆಂಡ್ ಸರಣಿಯ ವೈಫಲ್ಯ ಮಾತ್ರ ಕಾರಣವಲ್ಲ. 2020ರ ನಂತರದ ಆಟ ಟೀಮ್ ಇಂಡಿಯಾದ ಸ್ಪಿನ್ ವೀಕ್ನೆಸ್ನ ಎಕ್ಸ್ಪೋಸ್ ಮಾಡಿವೆ.