ಕಲಘಟಗಿ: ಮುತ್ತಗಿ ಗ್ರಾಮದಲ್ಲಿ ಇತ್ತೀಚಿಗೆ ಕಲುಷಿತ ನೀರಿನ ಸೇವನೆಯಿಂದ 50 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ವಾಂತಿ ಬೇಧಿಯಿಂದ ಆಸ್ಪತ್ರೆ ಸೇರಿದ್ದ ಹಿನ್ನೆಲೆಯಲ್ಲಿ ತಾಲ್ಲೂಕಿನ ಮುತ್ತಗಿ ಗ್ರಾಮಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಶುಕ್ರವಾರ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ವಿಚಾರಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಪರಿಶೀಲನೆ ಮಾಡುವಂತೆ ಸೂಚಿಸಿದರು. ಕೊಳವೆಬಾವಿ ನೀರು ತಾತ್ಕಾಲಿಕವಾಗಿ ಸ್ಥಗಿತ ಮಾಡಿ ಟ್ಯಾಂಕರ್ ಮೂಲಕವೇ ನೀರು ಪೂರೈಸಬೇಕು. ಕುಡಿಯುವ ನೀರು ಪರೀಕ್ಷೆ ಒಳಪಡಿಸಿ, ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
Weight Loss: ಬೇಗನೇ ತೂಕ ಕಳೆದುಕೊಳ್ಳಬೇಕೇ? ದಿನದ ಈ ಸಮಯದಲ್ಲಿ ಚಿಯಾ ಸೀಡ್ಸ್ ಸೇವಿಸಿ
ಗ್ರಾಮಸ್ಥರು ಅಮಾನತು ಅದ ಪಿಡಿಒ ವಿರುದ್ಧ ಹರಿಹಾಯ್ದರು ಪಂಚಾಯಿತಿಯವರು ಠರಾವು ಪಾಸ್ ಮಾಡಿ ಲಿಖಿತ ದೂರುಗಳನ್ನು ನೀಡಲು ಎಂದು ಲಾಡ್ ಹೇಳಿದರು. ಜಿಪಂ ಸಿಇಒ ಸ್ವರೂಪಾ ಟಿ.ಕೆ, ಡಿಎಚ್ ಒ ಡಾ. ಶಶಿ ಪಾಟೀಲ, ತಾಪಂ ಇಓ ಪರಶುರಾಮ ಸಾವಂತ, ತಾಲ್ಲೂಕ ವೈದ್ಯಾಧಿಕಾರಿ ಡಾ.ಕರ್ಲವಾಡ, ಎಸ್. ಆರ್ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಸೋಮಶೇಖರ್ ಬೆನ್ನೂರ, ಗುರು ಬೆಂಗೇರಿ, ಬಾಳು ಖಾನಾಪುರ ಹಾಗೂ ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಇದ್ದರು.
✍ ವರದಿ: ಮಾರುತಿ ಲಮಾಣಿ