ಶ್ರೀಲಂಕಾದಲ್ಲಿ ನವೆಂಬರ್ 14ರಂದು ನಡೆಯಲಿರುವ ಸಂಸದೀಯ ಚುನಾವಣೆಗೆ ಸಂಬಂಧಿಸಿದ ದೂರಿನ ಹಿನ್ನೆಲೆಯಲ್ಲಿ 6 ಅಭ್ಯರ್ಥಿಗಳ ಸಹಿತ 191 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಸದೀಯ ಚುನಾವಣೆಗೆ ಸಂಬಂಧಿಸಿದಂತೆ 168 ದೂರುಗಳನ್ನು ಸ್ವೀಕರಿಸಲಾಗಿದೆ. ಚುನಾವಣೆ ಕಾನೂನಿನ ಉಲ್ಲಂಘನೆಯ ಬಗ್ಗೆ 138 ದೂರುಗಳು, ಅಪರಾಧಕ್ಕೆ ಸಂಬಂಧಿಸಿದ 30 ದೂರುಗಳು ಇದರಲ್ಲಿ ಸೇರಿವೆ.
ದೂರಿನ ಅನ್ವಯ 45 ವಾಹನಗಳನ್ನು ಜಫ್ತಿ ಮಾಡಲಾಗಿದೆ ಎಂದು ಪೊಲೀಸ್ ಮಾಧ್ಯಮ ವಕ್ತಾರ ಡಿಐಜಿ ನಿಹಾಲ್ ಥಾಲ್ದುವಾರನ್ ಹೇಳಿದ್ದಾರೆ. ಈ ಮಧ್ಯೆ, ಸಂಸದೀಯ ಚುನಾವಣೆಗೆ ಸಂಬಂಧಿಸಿ 1,259 ದೂರುಗಳನ್ನು ಸ್ವೀಕರಿಸಿರುವುದಾಗಿ ಚುನಾವಣಾ ಆಯೋಗ ಮಾಹಿತಿ ನೀಡಿದೆ.