ಇಸ್ಲಾಮಿಕ್ ವಸ್ತ್ರ ಸಂಹಿತೆಯ ಕಠಿನ ಪ್ರತಿಪಾದಕ ರಾಷ್ಟ್ರವಾದ ಇರಾನ್ನಲ್ಲಿ ಯುವತಿಯೊಬ್ಬಳು ಅರೆಬೆತ್ತಲಾಗಿ ಓಡಾಡಿರುವ ಘಟನೆ ನಡೆದಿದ್ದು, ಈ ವೀಡಿಯೋ ವೈರಲ್ ಆಗಿದೆ. ವಸ್ತ್ರ ಸಂಹಿತೆ ವಿರೋಧಿಸಿ ಯುವತಿ ಪ್ರತಿಭಟನೆ ನಡೆಸಿದ್ದಾಳೆ ಎನ್ನಲಾಗಿದೆ.
ಇಸ್ಲಾಮಿಕ್ ಆಜಾದ್ ವಿವಿ ಮುಂದೆ ಯುವತಿ ಅರೆಬೆತ್ತಲೆಯಾಗಿ ಓಡಾಡಿದ್ದು, ಭದ್ರತಾ ಸಿಬ್ಬಂದಿ ಆಕೆಯನ್ನು ಬಂಧಿಸಿ ದ್ದಾರೆ.
ಈ ಬಗ್ಗೆ ವಿವಿ ವಕ್ತಾರ ಅಮೀರ್ ಮಹ್ಜೊಬ್ ಪ್ರತಿಕ್ರಿಯಿಸಿದ್ದು ಯುವತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಆಕೆ ಮಾನಸಿಕ ಅಸ್ವಸ್ಥೆ ಎಂದು ತಿಳಿದುಬಂದಿದೆ’ ಎಂದಿದ್ದಾರೆ. ಆದರೆ ಕೆಲವರು ಆಕೆ ಉದ್ದೇಶಪೂರ್ವಕವಾಗಿ ಸರಕಾರದ ವಿರುದ್ಧ ಅರೆಬೆತ್ತಲೆಯಾಗಿ ಪ್ರತಿಭಟಿಸಿದ್ದಾರೆ ಎಂದಿದ್ದಾರೆ.