ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ದೀಪಾವಳಿ ಹಬ್ಬವನ್ನು ಆಚರಿಸಿದ್ದು ಅದರ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ವಾರ ಹಿಂದೂ ಸಮುದಾಯದೊಂದಿಗೆ ಹಬ್ಬ ಆಚರಿಸಿ ಹಲವು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ, ತಾವು ಕಳೆದ ಕೆಲವು ತಿಂಗಳಲ್ಲಿ ಕೆನಡಾದ 3 ದೇವಸ್ಥಾನಗಳಿಗೆ ಭೇಟಿ ನೀಡಿದ್ದು, ಅಲ್ಲಿ ತಮ್ಮ ಕೈಗೆ ಕಟ್ಟಲಾದ ಕೆಂಪು ದಾರವನ್ನೂ ಅವರು ಪ್ರದರ್ಶಿಸಿದ್ದಾರೆ. ಈ ದಾರಗಳು ನನಗೆ ಶ್ರೀರಕ್ಷೆ. ಅವುಗಳಾಗಿಯೇ ಕಳಚಿ ಬೀಳುವವರೆಗೂ ನಾನು ಅವುಗಳನ್ನು ಕಳಚುವುದಿಲ್ಲ ಎಂದೂ ಟ್ರಾಡೋ ಬರೆದುಕೊಂಡಿದ್ದಾರೆ.