ಬೆಂಗಳೂರು: ಜಗ್ಗೇಶ್ ನಟನೆಯ ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ನಿಧನ ಹೊಂದಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮಾದನಾಯಕಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುಪ್ರಸಾದ್ ಅವರು ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಹಲವು ಅನುಮಾನಗಳಿಗೆ ಕಾರಣವಾದ ನಿರ್ದೇಶಕ ಗುರುಪ್ರಸಾದ್ ಸಾವು…!
ಅನುಮಾನ 1
ಸಾಲಗಾರರ ಕಾಟ
ಸುಮಾರು ಮೂರು ಕೋಟಿಯಷ್ಟು ಸಾಲ
ಪದೇ ಪದೇ ಮನೆ ಬದಲಾವಣೆ
ಸಾಲ ನೀಡಿದವರಿಂದ ಹಲವು ಪ್ರಕರಣ ದಾಖಲು
ಅನುಮಾನ 2
ಯಶಸ್ವಿ ನಿರ್ದೇಶಕನಾದ್ರು ಸಿನಿಮಾ ಬಿಡುಗಡೆಗೆ ಒದ್ದಾಟ
ಎದ್ದೇಳು ಮಂಜುನಾಥ 2 ಚಿತ್ರೀಕರಣ ಮುಕ್ತಾಯವಾಗಿ ಎರಡು ವರ್ಷವಾದರು ಬಿಡುಗಡೆ ಇಲ್ಲ
ಸಿನಿಮಾ ನಿರ್ಮಾಣ ಬಿಡುಗಡೆಗಾಗಿ ಕೋಟಿಗಟ್ಟಲೇ ಸಾಲ
ಅನುಮಾನ 3
ಹಲವು ಕೋರ್ಟ್ ಕೇಸ್
ಚೆಕ್ ಬೌನ್ಸ್ ಕೇಸ್ ನಲ್ಲಿ ಬಂಧನಭೀತಿ
ಸಾಲ ಮರುಪಾವತಿ ಮಾಡಲಿಕ್ಕೆ ಆಗದಿದ್ದಲ್ಲಿ ಬಂಧನ ಭೀತಿ
ಅರೆಸ್ಟ್ ಆಗುವ ಭಯದಲ್ಲಿ ಸಾವಿಗೆ ಶರಣು…!?
ಅನುಮಾನ 4
ಕೌಟುಂಬಿಕ ಕಲಹ
ಇತ್ತೀಚೆಗೆ ಎರಡನೇ ಮದುವೆಯಾಗಿದ್ದ ಗುರುಪ್ರಸಾದ್
ಮೊದಲ ಪತ್ನಿಯಿಂದ ದೂರವಾಗಿದ್ರು
ಎರಡನೇ ಮದುವೆಯಾಗಿದ್ರು ಗುರುಪ್ರಸಾದ್ ಮಾತ್ರ ಪ್ರತ್ಯೇಕ ವಾಸ
ಕೊನೆ ದಿನಗಳಲ್ಲಿ ಏಕಾಂಗಿಯಾಗಿದ್ದ ಗುರುಪ್ರಸಾದ್ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.