ಬೆಂಗಳೂರು: ಜಗ್ಗೇಶ್ ನಟನೆಯ ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ನಿಧನ ಹೊಂದಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮಾದನಾಯಕಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುಪ್ರಸಾದ್ ಅವರು ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಗುರುಪ್ರಸಾದ್ ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭಾವಂತ ನಿರ್ದೇಶಕ. ಚಿತ್ರರಂಗಕ್ಕೆ ಬಂದು ಬೇರೆಲ್ಲರಂತೆ ಕಷ್ಟ ಪಡಬಾರದು,ಇತರರಿಗೆ ಹೊರೆಯಾಗಬಾರದು ಎಂದು ವ್ಯವಸ್ಥಿತವಾಗಿ ಬಣ್ಣದ ಜಗತ್ತಿಗೆ ಬಂದಿದ್ದವರು ಗುರುಪ್ರಸಾದ್. ಆದರೆ ಇಂಥ ಗುರುಪ್ರಸಾದ್ ಎಲ್ಲಿ ಎಡವಿದರೋ ಗೊತ್ತಿಲ್ಲ. ಯಾವೆಲ್ಲವನ್ನೂ ತಪ್ಪು ಅಂತಾ ಗುರು ಗುರುತು ಮಾಡಿ ಹೇಳುತ್ತಿದ್ದರೋ ಅದೇ ಯಡವಟ್ಟುಗಳನ್ನು ಸ್ವತಃ ಮಾಡಿಕೊಂಡರು.
Mutual Fund: ಜಸ್ಟ್ 1 ಲಕ್ಷ ಹೂಡಿಕೆ ಮಾಡಿದ್ರೆ ಸಾಕು 1 ಕೋಟಿ ರೂ. ನಿಮ್ಮದಾಗುತ್ತೆ! ಹೇಗೆ ಗೊತ್ತಾ..?
ನಿರ್ದೇಶಕ ಗುರುಪ್ರಸಾದ್ ಕಳೆದ ವರ್ಷ ಚೆಕ್ ಬೌನ್ಸ್ ಕೇಸ್ವೊಂದರಲ್ಲಿ ಅರೆಸ್ಟ್ ಆಗಿದ್ದರು.ಇದಾದ ಬಳಿಕ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲದೆ ಜಯನಗರದ ಟೋಟಲ್ ಕನ್ನಡ ಪುಸ್ತಕ ಮಳಿಗೆಯಲ್ಲಿ ಪುಸ್ತಕ ಖರೀದಿಸಿ 65 ಸಾವಿರ ರೂಪಾಯಿ ಹಣ ನೀಡದೆ ಸತಾಯಿಸುತ್ತಿರುವುದಾಗಿ ಮಳಿಗೆ ಮಾಲೀಕ ಲಕ್ಷ್ಮೀಕಾಂತ್ ಆರೋಪಿಸಿದ್ದರು. ಹೀಗಾಗಿ ಆತ್ಮಹತ್ಯೆಯ ಹಿಂದೆ ಪೊಲೀಸರಿಗೆ ಹಲವು ಅನುಮಾನಗಳು ಮೂಡಿವೆ.
ಡೈರೆಕ್ಟರ್ ಗುರುಪ್ರಸಾದ್ ಕಳೆದ ಒಂದೇ ವರ್ಷದಲ್ಲಿ ಮೂರು ಮನೆ ಬದಲಿಸಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಸಾಲಗಾರರ ಕಾಟಕ್ಕೆ ಪದೇಪದೇ ಮನೆ ಚೇಂಜ್ ಮಾಡುತ್ತಿದ್ದರು. ಹೀಗಾಗಿ ಗುರುಪ್ರಸಾದ್ ವಿರುದ್ಧ ಹಲವರು ಪೊಲೀಸರಿಗೆ ಕಂಪ್ಲೆಂಟ್ ಮಾಡಿದ್ದಾರೆ ಎಂಬ ಸಂಗತಿ ಬಯಲಿಗೆ ಬಂದಿದೆ.
ಗುರುಪ್ರಸಾದ್ ಬಸವೇಶ್ವರನಗರ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನಂತರ ಜಯನಗರದ ಕನಕನಪಾಳ್ಯದ ಬಳಿ ವಾಸವಾಗಿದ್ದರು. ನಂತರ ಕೆಲ ದಿನಗಳ ಕಾಲ ಹೋಟೆಲ್ನಲ್ಲೂ ರೂಮ್ ಮಾಡಿದ್ದರು. ಕೆಲವೇ ತಿಂಗಳ ಹಿಂದೆ ನ್ಯೂ ಹೆವೆನ್ ಅಪಾರ್ಟ್ಮೆಂಟ್ಗೆ ಶಿಫ್ಟ್ ಆದರು. ಶಿಫ್ಟ್ ಆದ ಬಳಿಕ ಫ್ಲ್ಯಾಟ್ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿಯೂ ನೀಡಿರಲಿಲ್ಲ. ಸದ್ಯ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.