ಕೋಲಾರ: ಸರ್ಕಾರಿ ಜಾಗಗಳನ್ನು ವೋಟ್ ಬ್ಯಾಂಕ್ʼಗಾಗಿ ಮುಸ್ಲಿಮರಿಗೆ ಕೊಡುತ್ತಿದ್ದಾರೆ ಎಂದು ಮಾಜಿ ಸಂಸದ ಎಸ್ ಮುನಿಸ್ವಾಮಿ ಕಾಂಗಗ್ರೆಸ್ ವಿರುದ್ಧ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹಿಂದೂಗಳ ಸ್ಮಶಾನ ಜಾಗ, ರೈತರ ಜಾಗ, ವಂಶಪಾರಂಪರ್ಯವಾಗಿ ಬಂದ ಜಮೀನುಗಳನ್ನು ರಾತ್ರೋರಾತ್ರಿ ಖಾತೆ ಬದಲಾವಣೆ ಮಾಡಿದ್ದಾರೆ.
ಇದರಿಂದ ಕಾಂಗ್ರೆಸ್ ಪಕ್ಷದವರ ಅಸಲಿ ಬಣ್ಣ ಈಗ ಎಲ್ಲರಿಗೂ ಗೊತ್ತಾಗುತ್ತಿದೆ ಎಂದರು. ಕೋಲಾರದ ಸಂಗೊಂಡಹಳ್ಳಿ ದೇವಸ್ಥಾನ ಜಾಗದಲ್ಲಿ ಮಸೀದಿ ನಿರ್ಮಿಸಿದ್ದಾರೆ. ಕುಡಿಯನೂರು, ಲಕ್ಕೂರು ಆಂಜನೇಯ ದೇವಸ್ಥಾನದ ಜಾಗ, ಮುಳಬಾಗಿಲಿನ ಬೆಟ್ಟದ ಕೆಳಗಡೆಯ ಜಾಗ, ಅಂತರಗಂಗೆ ಬೆಟ್ಟದ ಸರ್ಕಾರಿ ಜಾಗಗಳನ್ನು ವೋಟ್ ಬ್ಯಾಂಕ್ ಗಾಗಿ ಮುಸ್ಲಿಮರಿಗೆ ಕೊಡುತ್ತಿದ್ದಾರೆ.
Mutual Fund: ಜಸ್ಟ್ 1 ಲಕ್ಷ ಹೂಡಿಕೆ ಮಾಡಿದ್ರೆ ಸಾಕು 1 ಕೋಟಿ ರೂ. ನಿಮ್ಮದಾಗುತ್ತೆ! ಹೇಗೆ ಗೊತ್ತಾ..?
ಹಿಂದೂಸ್ತಾನ – ಪಾಕಿಸ್ತಾನ ಅಂತ ದೇಶ ವಿಭಜನೆ ವೇಳೆ ಎಲ್ಲಾ ಜಾಗವೂ ಹಿಂದೂಸ್ತಾನಕ್ಕೆ ಸೇರಿದ್ದು. ಆದ್ರೆ ಈಗ ಲಕ್ಷಾಂತರ ಕೋಟಿ ರೂ. ಮೌಲ್ಯದ ಜಮೀನುಗಳನ್ನು ಕಾನೂನು ಬಾಹಿರವಾಗಿ ವಕ್ಫ್ ಬೋರ್ಡ್ ಗೆ ಬರೆದಿದ್ದಾರೆ.
ಸಚಿವ ಜಮೀರ್ ಅಹಮದ್ ಖಾನ್ ಪಾಕಿಸ್ತಾನ ಏಜೆಂಟ್ ಆಗಿದ್ದಾರೆ. ಪಾಕಿಸ್ತಾನದವರ ಮೇಲೆ ಹೆಚ್ಚು ಪ್ರೀತಿಯಾಗಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಇಷ್ಟ ಆಗಿರುವ ರೈತರ ಜಮೀನುಗಳನ್ನು ಖಾತೆ ಬದಲಾವಣೆ ಮಾಡಿ ವಕ್ಫ್ ಬೋರ್ಡ್ ಗೆ ಸೇರಿಸಿದ್ದಾರೆ. ದೇಶದಿಂದ ನಿಮ್ಮನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು. ತಪ್ಪು ಮಾಡಿರುವ ನಿಮಗೆ ಶಿಕ್ಷೆ ಆಗುವವರೆಗೂ ನಾವು ಬಿಡುವುದಿಲ್ಲ ಎಂದು ಹೇಳಿದರು.