ರಿಂಕು ಸಿಂಗ್ ನಿಯತ್ತಿಗೆ KKR ಪ್ರಾಂಚೈಸಿಯು ಕೋಟಿ ಕೋಟಿ ಹಣ ಕೊಟ್ಟಿದೆ.
IPL 2025: RCB ಫ್ಯಾನ್ಸ್ ಗೆ ನಿರಾಸೆ: ಬೆಂಗಳೂರಿನಲ್ಲಿ ಮುಗಿದ KGF ಅಧ್ಯಾಯ!
2018 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ರಿಂಕು ಸಿಂಗ್ ಅವರನ್ನು ಖರೀದಿಸಿದ್ದು ಬರೋಬ್ಬರಿ 80 ಲಕ್ಷ ರೂ.ಗೆ, ಆದರೆ ಆ ಬಳಿಕ ಏರಿಕೆಯತ್ತ ಸಾಗಬೇಕಿದ್ದ ರಿಂಕು ಅವರ ಸಂಭಾವನೆ ಇಳಿಮುಖವಾಗಿದ್ದು ಮಾತ್ರ ವಿಪರ್ಯಾಸ. ಅದರಲ್ಲೂ 2022 ರಲ್ಲಿ ಕೆಕೆಆರ್ ಫ್ರಾಂಚೈಸಿಯು ಯುವ ದಾಂಡಿಗನನ್ನು ಕೇವಲ 55 ಲಕ್ಷ ರೂ.ಗೆ ರಿಟೈನ್ ಮಾಡಿಕೊಂಡಿತ್ತು.
ಅಷ್ಟೇ ಅಲ್ಲದೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೆ ರಿಂಕು ಸಿಂಗ್ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡಿದ್ದವು. ಇದರ ನಡುವೆ ಕೆಕೆಆರ್ ಆಟಗಾರ ನೀಡಿದ ಹೇಳಿಕೆಯು ಆತನಿಗೆ ನೈಟ್ ರೈಡರ್ಸ್ ತಂಡದ ಮೇಲಿನ ನಿಯತ್ತನ್ನು ಬಹಿರಂಗಪಡಿಸಿತ್ತು.
ನನ್ನ ಪಾಲಿಗೆ 50-55 ಲಕ್ಷ ರೂ. ದೊಡ್ಡ ಮೊತ್ತ. ನಾನು ಕೆರಿಯರ್ ಶುರು ಮಾಡಿದಾಗ ಇಷ್ಟು ಮೊತ್ತ ಗಳಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಬಾಲ್ಯದಲ್ಲಿ 10-5 ರೂಪಾಯಿಗೂ ಒದ್ದಾಡುತ್ತಿದ್ದವನಿಗೆ 55 ಲಕ್ಷ ರೂ. ಸಿಗುತ್ತಿದೆ. ಇದರಿಂದ ನಾನು ಸಂತೃಪ್ತನಾಗಿದ್ದೇನೆ ಎಂದು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ನಡೆಯನ್ನು ರಿಂಕು ಸಿಂಗ್ ಸಮರ್ಥಿಸಿಕೊಂಡಿದ್ದರು.
ಈ ಸಮರ್ಥನೆಗೆ ಉಡುಗೊರೆಯೋ, ಅಥವಾ ಕೆಕೆಆರ್ಗೆ ತೋರಿದ ನಿಯತ್ತಿನ ಫಲವೊ… ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಸ್ಟಾರ್ ಆಟಗಾರರನ್ನು ಬದಿಗಿಟ್ಟು ರಿಂಕು ಸಿಂಗ್ ಅವರನ್ನು ಮೊದಲ ರಿಟೈನ್ ಆಗಿ ಆಯ್ಕೆ ಮಾಡಿಕೊಂಡಿದೆ. ಅಲ್ಲದೆ ಬರೋಬ್ಬರಿ 13 ಕೋಟಿ ರೂ. ನೀಡಿದೆ. ಅಂದರೆ ಕಳೆದ ಬಾರಿಗಿಂತ ರಿಂಕು ಸಿಂಗ್ ಅವರ ಸಂಭಾವನೆಯನ್ನು 23 ಪಟ್ಟು ಹೆಚ್ಚಿಸಲಾಗಿದೆ