ಬೆಂಗಳೂರು:– ನಡು ರಸ್ತೆಯಲ್ಲೇ ಎಲೆಕ್ಟ್ರಿಕ್ ಬೈಕ್ ಹೊತ್ತಿ ಉಳಿದಿದ್ದು, ಅನಾಹುತ ತಪ್ಪಿದೆ. ಈ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
ಬಸ್ ನಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡ್ತಿರೋದು ಕಷ್ಟವಾಗ್ತಿದೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ!
ನಗರದ ಬೆಮೆಲ್ ಲೇಔಟ್ ರಸ್ತೆಯಲ್ಲಿ ಘಟನೆ ಜರುಗಿದೆ. ಶಿವಾನಂದ ಎಂಬುವರು ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಆರ್ಆರ್ ನಗರದ ಕಚೇರಿಗೆ ಬಂದಿದ್ದರು. ನಂತರ ಕಚೇರಿಯಿಂದ ನಾಗರಭಾವಿಗೆ ತೆರಳಲು ಸ್ಕೂಟರ್ ತೆಗೆದು ಹೊರ ಬರುವಾಗ ಸಣ್ಣ ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ.
ಹೊಗೆ ಬರುತ್ತಿರುವುದನ್ನು ನೋಡಿ ರಸ್ತೆ ಬದಿ ಶಿವಾನಂದ ಸ್ಕೂಟರ್ ನಿಲ್ಲಿಸಿದ್ದಾರೆ. ಈ ವೇಳೆ ಕ್ಷಣ ಮಾತ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿದೆ. ಸ್ಥಳೀಯರು ಬ್ಯಾಟರಿ ಹೊರ ತೆಗೆದು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಎಲೆಕ್ಟ್ರಿಕ್ ಬೈಕ್ ಸುಟ್ಟು ಕರಕಲಾಗಿದ್ದು ಸ್ಥಳಕ್ಕೆ ಆರ್ ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.