ಬೆಂಗಳೂರು:- ನಗರದಲ್ಲಿ ದೀಪಾವಳಿ ಸಂಭ್ರಮದ ಜೊತೆ ಪಟಾಕಿ, ಸದ್ದು ಜೋರಾಗಿದೆ. ಪಟಾಕಿಯಿಂದ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ಕಳೆದ ಒಂದು ವಾರಕ್ಕೆ ಹೋಲಿಕೆ ಮಾಡಿದರೆ, ಈ ವಾರ ವಾಯುಮಾಲಿನ್ಯ ಬಹಳಷ್ಟು ಹೆಚ್ಚಳವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಲಕ್ಷ-ಲಕ್ಷ ಕಟ್ಟಿ ಇಸ್ಪೀಟ್ ಆಡ್ತಿದ್ದ ಅಡ್ಡೆ ಮೇಲೆ ಖಾಕಿ ದಾಳಿ: ಪೊಲೀಸರ ಮೇಲೆಯೇ ಪೆಪ್ಪರ್ ಸ್ಪ್ರೇ!
ಕಳೆದ ವಾರ 50ರ ಆಸುಪಾಸಿನಲ್ಲಿದ್ದಂತಹ ವಾಯು ಪ್ರಮಾಣ ಎರಡು-ಮೂರು ದಿನದಲ್ಲಿ 100ರ ಗಡಿ ದಾಟಿದ್ದು, ಕಳಪೆ ಗುಣಮಟ್ಟದ ಗಾಳಿಯನ್ನ ಹೊಂದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ 50 ಎಕ್ಯೂ ಇದ್ದರೆ ಉತ್ತಮ ಗಾಳಿ ಎಂದರ್ಥ. 60 ರಿಂದ 80 ರ ಗಡಿಯಲ್ಲಿದ್ದರೆ ಸಾಧಾರಣ ಗುಣಮಟ್ಟದಲ್ಲಿದೆ. 100 ರಿಂದ 150ರ ಆಸುಪಾಸಿನಲ್ಲಿದ್ದರೆ ಉಸಿರಾಡಲು ಯೋಗ್ಯವಲ್ಲದ ಗಾಳಿ ಎಂದು ಹೇಳಲಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 130ರ ಗಡಿ ದಾಟಿದೆ.
ಇಂದಿನ ಗಾಳಿಯ ಗುಣಮಟ್ಟವಿದೆ
ಜಯನಗರದಲ್ಲಿ – 124 ಎಕ್ಯೂ
ಬಿಟಿಎಂ ಲೇಔಟ್ – 130 ಎಕ್ಯೂ
ಬಾಪುಜಿನಗರ – 110 ಎಕ್ಯೂ
ಸಿಲ್ಕ್ ಬೋರ್ಡ್- 97 ಎಕ್ಯೂ
ಮಹದೇವಪುರ – 74 ಎಕ್ಯೂ
ಹೆಬ್ಬಾಳ – 142 ಎಕ್ಯೂ
ಪೀಣ್ಯ – 141 ಎಕ್ಯೂ
ಸಿಟಿ ರೈಲ್ವೆ ಸ್ಟೇಷನ್ – 84 ಎಕ್ಯೂ
ಜಿಗಣಿ – 133 ಎಕ್ಯೂ
ಬಾಪುಜಿನಗರ – 98 ಎಕ್ಯೂ
ಹೊಂಬೆಗೌಡ ನಗರ – 95 ಎಕ್ಯೂ
ನಿಮ್ಯಾನ್ಸ್ ರಸ್ತೆ – 114 ಎಕ್ಯೂನಷ್ಟು ಗಾಳಿ ಗುಣಮಟ್ಟವಿದೆ.
ಶುಕ್ರವಾರ ಗಾಳಿ ಗುಣಮಟ್ಟ
ಬಿಟಿಎಂ ಲೇಔಟ್ – 143 ಎಕ್ಯೂ
ಬಾಪುಜಿನಗರ- 117 ಎಕ್ಯೂ
ಸಿಟಿ ರೈಲ್ವೆ ಸ್ಟೇಷನ್ ಮೆಜೆಸ್ಟಿಕ್- 150 ಎಕ್ಯೂ
ಹೆಬ್ಬಾಳ – 126 ಎಕ್ಯೂ
ಹೊಂಬೆಗೌಡ ನಗರ – 99 ಎಕ್ಯೂ
ಜಯನಗರ5th ಬ್ಲಾಕ್ – 113 ಎಕ್ಯೂ
ಜಿಗಣಿ – 131 ಎಕ್ಯೂ ಕಸ್ತೂರಿ ನಗರ – 131 ಎಕ್ಯೂ
ಆರ್ ವಿ ಸಿ ಇ ಮಲ್ಲಸಾಂದ್ರಾ – 122 ಎಕ್ಯೂ
ಸಾನೇಗುರುವಹಳ್ಳಿ – 72 ಎಕ್ಯೂ
ಶಿವಪುರ – 128 ಎಕ್ಯೂ
ಸಿಲ್ಮ್ ಬೋರ್ಡ್ – 110 ಎಕ್ಯೂ