IPL 2025ರ IPL ಮೆಗಾ ಹರಾಜಿಗೂ ಮುನ್ನ ಎಲ್ಲಾ ಪ್ರಾಂಚೈಸಿಗಳು ತಾವು ಉಳಿಸಿಕೊಂಡ ಆಟಗಾರರನ್ನು ಪ್ರಕಟಿಸಿದೆ. ಇದರಲ್ಲಿ RCB ಕೇವಲ ಮೂವರನ್ನು ಉಳಿಸಿಕೊಂಡಿದೆ.
ಸರ್ವರಿಗೂ “ಕನ್ನಡ ರಾಜ್ಯೋತ್ಸವ”ದ ಶುಭಾಶಯಗಳು: ನಾಡ ಹಬ್ಬದ ಮಹತ್ವ, ಇತಿಹಾಸದ ಬಗ್ಗೆ ಗೊತ್ತೆ? ಇಲ್ಲಿದೆ ಮಾಹಿತಿ
ಕಳೆದ ಐಪಿಎಲ್ ಆರಂಭಕ್ಕೂ ಮುನ್ನ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ನಿಂದ ಆರ್ಸಿಬಿ 17.50 ಕೋಟಿ ರೂ.ಗೆ ಟ್ರೇಡ್ ಮಾಡಿಕೊಂಡಿತ್ತು. ಪಡೆದ ಹಣಕ್ಕೆ ಸರಿಯಾಗಿ ಗ್ರೀನ್ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಗ್ರೀನ್ ಆಡಿದ 13 ಪಂದ್ಯಗಳಲ್ಲಿ 255 ರನ್ ಕಲೆಹಾಕಿದಲ್ಲದೆ, 10 ವಿಕೆಟ್ಗಳನ್ನು ಪಡೆದಿದ್ದರು. ಆದರೆ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಿಲ್ಲ. ಆರ್ಸಿಬಿಯ ಈ ನಿರ್ಧಾರಕ್ಕೆ ಕಾರಣವೂ ಇದ್ದು, ಈ ಕುರಿತು ಆರ್ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಸ್ಪಷ್ಟನೆ ನೀಡಿದ್ದಾರೆ
ಗ್ರೀನ್ ಅವರನ್ನು ರಿಟೈನ್ ಮಾಡದಿರುವ ಬಗ್ಗೆ ಹೇಳಿಕೆ ನೀಡಿರುವ ಬೊಬಾಟ್, ನಾವು ಗ್ರೀನ್ ಅವರನ್ನು ರಿಟೈನ್ ಮಾಡಿಕೊಳ್ಳಲು ಬಯಸಿದ್ದವು. ಆದರೆ ಇಂಜುರಿ ಕಾರಣದಿಂದಾಗಿ ಗ್ರೀನ್ ಅವರೇ ಮುಂದಿನ ಆವೃತ್ತಿ ಆಡದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಅವರನ್ನು ರಿಟೈನ್ ಮಾಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇದರಿಂದಾಗಿ ಅವರು ಸುಮಾರು 6 ತಿಂಗಳ ಕಾಲ ಕ್ರಿಕೆಟ್ ಮೈದಾನದಿಂದ ದೂರ ಉಳಿಯಬಹುದು. ಈ ಗಾಯದಿಂದಾಗಿ ಅವರು ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಮತ್ತು ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಗುಳಿದಿದ್ದಾರೆ.