ಬೆಂಗಳೂರು: ದೇಶದ ಜನತೆಗೆ ನವೆಂಬರ್ ತಿಂಗಳ ಮೊದಲ ದಿನವೇ ಭರ್ಜರಿ ಶಾಕ್ ತಟ್ಟಿದೆ. ಗ್ಯಾಸ್ ಸಿಲಿಂಡರ್ ಬೆಲೆ ಇಂದಿನಿಂದ ಭರ್ಜರಿ ಏರಿಕೆಯಾಗಿದ್ದು, ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್ ಬೆಲೆ ಏರಿಕೆ ಮಾಡಲು ನಿರ್ಧರಿಸಿರುವುದರಿಂದ ಜನರ ಜೇಬಿಗೆ ಕತ್ತರಿ ಬೀಳಲಿದೆ.
ಹೌದು ದೇಶಾದ್ಯಂತ ಇಂದು ದೀಪಾವಳಿ ಸಂಭ್ರಮ ಮನೆ ಮಾಡಿದೆ. ಆದರೆ ಸದ್ದಿಲ್ಲದೆ ಸತತ 3ನೇ ತಿಂಗಳು ಎಲ್ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಇದೀಗ 62 ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದ ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಿಲಿಂಡರ್ ಬೆಲೆ ದುಬಾರಿಯಾಗಿದೆ. ಶೀಘ್ರದಲ್ಲೇ ಹೊಟೆಲ್ ತಿನಿಸು ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ.14 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬೆಲೆ ಏರಿಕೆ ಮಾಡಿಲ್ಲ.
ಬೆಲೆ ಏರಿಕೆ ಬಳಿಕ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1802 ರೂಪಾಯಿಗೆ ಏರಿಕೆಯಾಗಿದೆ. ಸೆಪ್ಟೆಂಬರ್, ಅಕ್ಟೋಬರ್ ಇದೀಗ ನವೆಂಬರ್ ಸತತ ಮೂರು ತಿಂಗಳು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 48 ರೂಪಾಯಿ ಏರಿಕೆಯಾಗಿತ್ತು. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 39 ರೂಪಾಯಿ ಏರಿಕೆ ಮಾಡಲಾಗಿತ್ತು.
ಸರ್ವರಿಗೂ “ಕನ್ನಡ ರಾಜ್ಯೋತ್ಸವ”ದ ಶುಭಾಶಯಗಳು: ನಾಡ ಹಬ್ಬದ ಮಹತ್ವ, ಇತಿಹಾಸದ ಬಗ್ಗೆ ಗೊತ್ತೆ? ಇಲ್ಲಿದೆ ಮಾಹಿತಿ
ಕೊಂಚ ಸಮಾಧಾನದ ವಿಷಯ ಎಂದರೆ ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ ಈ ಬಾರಿಯ ದೀಪಾವಳಿಯನ್ನು ನೆಮ್ಮದಿಯಿಂದ ಆಚರಿಸುವಂತಾಗಿದೆ. ಆದರೆ ಹೊಟೆಲ್ ತಿಂಡಿ ಸೇರಿದಂತೆ ವಾಣಿಜ್ಯ ಸಿಲಿಂಡರ್ ಬಳಕೆ ಮಾಡುವ ಸಂಸ್ಥೆಗಳಲ್ಲಿನ ಉತ್ಪನ್ನಗಳ ಬೆಲೆ ಶೀಘ್ರದಲ್ಲೇ ಏರಿಕೆಯಾಗಲಿದೆ.
19 ಕೆಜಿ ಎಲ್ಪಿಜಿ ಸಿಲಿಂಡರ್ ಪರಿಷ್ಕೃತ ಬೆಲೆ
ಬೆಂಗಳೂರು: 1880 ರೂಪಾಯಿ
ದೆಹಲಿ: 1802 ರೂಪಾಯಿ
ಮುಂಬೈ: 1754.50 ರೂಪಾಯ
ಕೋಲ್ಕತಾ:1911.50 ರೂಪಾಯಿ
ಚೆನ್ನೈ: 1,964 .50 ರೂಪಾಯಿ
ಡೊಮೆಸ್ಟಿಕ್ ಆಯಿಲ್ ಮಾರ್ಕೆಟಿಂಗ್ ಕಂಪನಿ(OMCs) ಬೆಲೆ ಪರಿಷ್ಕರಣೆ ಮಾಡಿದೆ. ಕೇವಲ 10 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಮಾತ್ರವಲ್ಲ, ವಿಮಾನಗಳ ಇಂಧನದ ಬೆಲೆಯೂ ಏರಿಕೆ ಮಾಡಲಾಗಿದೆ. ಎವಿಯೇಶನ್ ಟರ್ಬೈನ್ ಫ್ಯೂಯೆಲ್(ATF) ಏರ್ಕ್ರಾಫ್ಟ್ ಗ್ಯಾಸ್ ಟರ್ಬೈನ್ ಎಂಜಿನ್ಗಳಲ್ಲಿ ಬಳಸುವ ಇಂಧನ ದರ ಇದೀಗ ದುಬಾರಿಯಾಗಿದೆ. ಇದೀಗ ಜೆಟ್ ಫ್ಯೂಯೆಲ್ ಬೆಲೆ ನವೆಂಬರ್ 1 ರಿಂದ ಮುಂಬೈನಲ್ಲಿ 2,941.5 ಪ್ರತಿ ಕಿಲೋಲೀಟರ್ಗೆ. ಇನ್ನು ದೆಹಲಿಯಲ್ಲಿ ಪ್ರತಿ ಕಿಲೋಲೀಟರ್ಗೆ 90,538.72 ರೂಪಾಯಿ, ಕೋಲ್ಕತಾದಲ್ಲಿ ಪ್ರತಿ ಕಿಲೋಲೀಟರ್ಗೆ 93,392.79 ರೂಪಾಯಿ, ಮುಂಬೈನಲ್ಲಿ 84,642.91 ರೂಪಾಯಿ ಹಾಗೂ ಚೆನ್ನೈನಲ್ಲಿ 93,957.10 ರೂಪಾಯಿ ಆಗಿದೆ.