ಬೆಂಗಳೂರು: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಅದೇ ರೀತಿ 2024-25ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ವಿವಿಧ ಘಟಕಗಳ ಸಬ್ಸಿಡಿ ಸಹಾಯಧನ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿ ರೈತರಿಂದ ಅರ್ಜಿಯನ್ನ ಆಹ್ವಾನಿಸಲಾಗಿದೆ. ಅರ್ಹ ರೈತರು ಅರ್ಜಿಯ ನಮೂನೆಗಳನ್ನ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದು ಅರ್ಜಿಯನ್ನ ಸಲ್ಲಿಸಬಹುದು.
ಈ ಯೋಜನೆಯನ್ನು ರೈತರ ಅವಶ್ಯಕತೆಗನುಗುಣವಾಗಿ ಅಚ್ಚು ಕಟ್ಟು ಪ್ರದೇಶವನ್ನು ಒಳಗೊಂಡಂತೆ ಅನುಷ್ಠಾನಗೊಳಿಸಲಾಗುವುದು. ಯಾವೆಲ್ಲಾ ಘಟಕಗಳಿಗೆ ಎಷ್ಟು ಸಬ್ಸಿಡಿ ನೀಡಲಾಗುವುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.
ಈ ಅರ್ಹತೆ ಹೊಂದಿರುವುದು ಕಡ್ಡಾಯ:
- ಕ್ಷೇತ್ರಬದು ನಿರ್ಮಾಣಕ್ಕೆ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ವಂಗಡ ವರ್ಗ 90%)
• ಕೃಷಿ ಹೊಂಡ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗ 90%)
• ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗ 90%)
• ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (ಸಾಮಾನ್ಯ ವರ್ಗ 40% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ವಂಗಡ ವರ್ಗ 50%)
• ಕೃಷಿ ಹೊಂಡದಿಂದ ನೀರು ಎತ್ತಲು ಡಿಸೇಲ್ / ಪೇಟ್ರೋಲ್ ಪಂಪ್ಸೆಟ್ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗ 90%)
• ನೀರನ್ನು ಬೆಳಗೆ ಹಾಯಿಸಲು ಸೂಕ್ಷ್ಮ (ತುಂತುರು / ಹನಿ) ನೀರಾವರಿ (ಎಲ್ಲಾ ವರ್ಗದ ರೈತರಿಗೆ 90%) ಸೌಲಭ್ಯಗಳನ್ನು ನಿಯಮಾನುಸಾರ ನೀಡಲಾಗುವುದು.
ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಿ ಬೆಳೆಗಳ ಸಂದಿಗ್ದ ಹಂತದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಕೃಷಿ ಭಾಗ್ಯ ಯೋಜನೆಯ ಉದ್ದೇಶವಾಗಿದ್ದು, ಪ್ರತಿಯೊಬ್ಬ ಫಲಾನುಭವಿಗೆ ಮೇಲೆ ತಿಳಿಸಿದ ಎಲ್ಲಾ ಘಟಕಗಳನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಲಾಗುವುದು.
ಅರ್ಜಿ ಸಲ್ಲಿಕೆ ಎಲ್ಲಿ?;
ಅರ್ಹ ರೈತರು ಅರ್ಜಿಯ ನಮೂನೆಗಳು ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದು ಅರ್ಜಿ ಸಲ್ಲಿಸಬಹುದು.