ಬೆಂಗಳೂರು: ಪ್ರತಿವರ್ಷ ಕೊಡ ಮಾಡುವ ಕೇಂದ್ರದ ಗೃಹಮಂತ್ರಿ ದಕ್ಷತಾ ಪದಕಕ್ಕೆ ಈ ಬಾರಿ ಏಳು ಮಂದಿ ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ. ಕ್ಲಿಷ್ಟ ರೀತಿಯ ಅಪರಾಧ ಪ್ರಕರಣಗಳ ಬೇಧಿಸಿ ಉತ್ತಮ ತನಿಖೆ ನಡೆಸುವ ತನಿಖಾಧಿಕಾರಿಗಳಿಗೆ ಪ್ರತಿ ವರ್ಷ ಕೇಂದ್ರ ಗೃಹ ಸಚಿವಾಲಯವು ಗೃಹ ಮಂತ್ರಿ ಹೆಸರಿನಲ್ಲಿ ಪದಕ ನೀಡಲಿದೆ. ಇದೇ ರೀತಿ ಅಪರಾಧ ಪ್ರಕರಣಗಳಲ್ಲಿ ಅತ್ಯುತ್ತಮ ತನಿಖೆ ನಡೆಸಿದ್ದ ಇಬ್ಬರು ಡಿವೈಎಸ್ಪಿ ಸೇರಿ 7 ಮಂದಿ ಅಧಿಕಾರಿಗಳು ಪದಕ ಲಭಿಸಿವೆ.
ಪದಕ ಪಡೆದವರ ವಿವರ
ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಡಿವೈಎಸ್ಪಿ ಬಸವರಾಜ್ ಕೆ. ಬೆಂಗಳೂರು ನಗರದ ಎಸಿಪಿ ವಿ.ಎಲ್. ರಮೇಶ್, ಇನ್ ಸ್ಪೆಕ್ಟರ್ ಗಳಾದ ಉಮೇಶ್ ಕಾಂಬ್ಳೆ, ನರೇಂದ್ರ ಬಾಬು, ವಸಂತ್ ಕೆ.ಎಂ, ರಮೇಶ್ ಎಚ್, ವಿಧಿವಿಜ್ಞಾನ ಪ್ರಯೋಗಾಲಯ (ಎಫ್ ಎಸ್ ಎಲ್) ಸೇವೆ ಸಲ್ಲಿಸುತ್ತಿರುವ ಡೆಪ್ಯೂಟಿ ಡೈರೆಕ್ಟರ್ ಡಾ.ಪ್ರವೀಣ್ ಸಂಗನಾಳ್ ಮಠ ಅವರಿಗೆ ಪದಕ ದೊರೆತಿದೆ.