ಹಾವೇರಿ: ನೀವು ಕೊಟ್ಟ ಮನವಿಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ನೀವು ನನಗೆ ಕೊಟ್ಟ ಅಧಿಕಾರ ವನ್ನು ಗುಲಗುಂಜಿಯಷ್ಟು ಸ್ವಂತಕ್ಕೆ ಬಳಕೆ ಮಾಡಿಕೊಳ್ಳದೇ ಕ್ಷೇತ್ರದ ಅಭಿವೃದ್ಧಿ ಗೆ ಕೆಲಸ ಮಾಡಿದ್ದೇನೆ ಎಂದರು.
ಮೊದಲು ಶಾಸಕರು ಒಂದು ಕೆಲಸ ಮಾಡಿದರೆ ಐದು ವರ್ಷ ಅದನ್ನೇ ಹೇಳುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಜನರು ಪ್ರಜ್ಞಾವಂತರಾಗಿದ್ದಾರೆ. ನಿರಂತರ ಅಭಿವೃದ್ಧಿ ಬಯಸುತ್ತಾರೆ. ಅಭಿವೃದ್ಧಿ ಮಾಡುವುದು ಸವಾಲಿನ ಕೆಲಸ ಆದರೆ, ನಾನು ನಿರಂತರ ಕ್ಷೇತ್ರದ ಅಭಿವೃದ್ಧಿ ಮಾಡುತ್ತ ಬಂದಿದ್ದೇನೆ ಎಂದರು.
ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆ ಮಾಡ್ತೀರಾ? ಹಾಗಾದ್ರೆ ಈ ಕಾಯಿಲೆಗಳು ಬರುವ ಸಾಧ್ಯತೆ
ನಾನು ಎಲ್ಲ ಸಮುದಾಯಗಳ ಪರವಾಗಿ ಕೆಲಸ ಮಾಡಿತ್ತೇನೆ. ಕಾಂಗ್ರೆಸ್ ನವರು ಕೆಲವು ಸಮುದಾಯಗಳು ತಮಗೇ ಮೀಸಲು ಎನ್ನುವಂತೆ ತಿಳಿದುಕೊಂಡಿದ್ದಾರೆ. ಆದರೆ, ಯಾರು ತಮ್ಮ ಪರವಾಗಿ ಕೆಲಸ ಮಾಡುತ್ತಾರೊ ಅವರ ಜೊತೆ ಜನರು ಇರುತ್ತಾರೆ. ನಮ್ಮ ಕ್ಷೇತ್ರ ಸಾಮರಸ್ಯದಿಂದ ಕೂಡಿದೆ.
ನಾನು ರಾಜಿನಾಮೆ ನೀಡಿದ ಮೇಲೆ ಪೊಲಿಸ್ ಸ್ಟೇಷನ್ ಗೆ ಅಲೆಯುವಂತೆ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ಅಧಿಕಾರ ಇರಬೇಕು. ಪೊಲಿಸ್ ಅಧಿಕಾರ ಇರಬಾರದು ಪೊಲಿಸ್ ಸ್ಟೇಷನ್ವಗೆ ಹೋದರೆ ದೂರು ಕೊಟ್ಡವನೂ ಅರೋಪಿ ಇಬ್ಬರೂ ಪೊಲಿಸರಿಗೆ ದುಡ್ಡು ಕೊಟ್ಟು ಅಲೆದಾಡಬೇಕಾಗುತ್ತದೆ. ಹೀಗಾಗಿ ಪೊಲಿಸ್ ಅಧಿಕಾರವನ್ನಜ ಕೊಣೆಗಾಣಿಸಲು ಭರತ್ ಬೊಮ್ಮಾಯಿಯನ್ನು ಗೆಲ್ಲಿಸಬೇಕು ಎಂದರು.