ಮೊದಲೆಲ್ಲ ಪೋಸ್ಟ್ ಆಫೀಸ್ ಎಂದರೆ ಪತ್ರ ವ್ಯವಹಾರ ಮಾತ್ರ ಇತ್ತು. ಆದರೀಗ, ಅಂಚೆ ಕಚೇರಿಗಳು ಬ್ಯಾಂಕ್ಗಳಾಗಿಯೂ ಮಾರ್ಪಾಡಾಗಿರುವುದರಿಂದ ಪೋಸ್ಟ್ ಆಫೀಸ್ಗಳಿಗೆ ಹೆಚ್ಚಿನ ಜನ ತೆರಳುವ, ವಹಿವಾಟು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಪೋಸ್ಟ್ ಆಫೀಸ್ ಬ್ಯಾಂಕ್ಗಳಲ್ಲಿ ಉಳಿತಾಯ ಯೋಜನೆಗಳಿಗೆ ಆಕರ್ಷಕ ಬಡ್ಡಿಯೂ ಸಿಗುವುದರಿಂದ ಹೆಚ್ಚಿನ ಜನ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಮೂಲಕ ಲಾಭ ಗಳಿಸುತ್ತಿದ್ದಾರೆ.
ಪಿಂಚಣಿದಾರರಿಗೆ ಗುಡ್ ನ್ಯೂಸ್: ಇನ್ನುಂದೆ ಮನೆಯಿಂದಲೇ “ಡಿಜಿಟಲ್ ಜೀವನ ಪ್ರಮಾಣ ಪತ್ರ” ಪಡೆಯಿರಿ!
ಅಂಚೆ ಕಚೇರಿ ಗ್ರಾಮ್ ಸುರಕ್ಷಾ ಯೋಜನೆ ಕೂಡ ಒಂದು. ಇದು ಜೀವ ವಿಮಾ ಯೋಜನೆಯಾಗಿದ್ದು, ಕಡಿಮೆ ಅಪಾಯ ಹಾಗೂ ಹೆಚ್ಚಿನ ಲಾಭ ತರೋ ಅಂಚೆ ಇಲಾಖೆಯ ಯೋಜನೆಗೆ ಇದು ಒಂದು ಅತ್ಯುತ್ತಮ ನಿದರ್ಶನವಾಗಿದೆ. ಇನ್ನು ಈ ವಿಮಾ ಯೋಜನೆಯನ್ನು ಐದು ವರ್ಷಗಳ ಕವರೇಜ್ ಬಳಿಕ ಎಂಡೋಮೆಂಟ್ ಪಾಲಿಸಿಯಾಗಿ ಪರಿವರ್ತಿಸಬಹುದು. ಪ್ರೀಮಿಯಂ ಮೊತ್ತ ಕೂಡ ಕಡಿಮೆಯಿದೆ.
ಈ ಪಾಲಿಸಿ ಪಡೆಯಲು ವಯೋಮಿತಿ ಎಷ್ಟು?
ಈ ಪಾಲಿಸಿ ಖರೀದಿಗೆ ಕನಿಷ್ಠ ವಯಸ್ಸು 19 ವರ್ಷ ಹಾಗೂ ಗರಿಷ್ಠ ವಯೋಮಿತಿ 55 ವರ್ಷಗಳು. ಈ ಪಾಲಿಸಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೊತ್ತ 10,000ರೂ. ಹಾಗೂ ಗರಿಷ್ಠ ಮೊತ್ತ 10 ಲಕ್ಷ ರೂ. ನಾಲ್ಕು ವರ್ಷಗಳ ಕವರೇಜ್ ಬಳಿಕ ಪಾಲಿಸಿದಾರರು ಸಾಲ ಸೌಲಭ್ಯ ಕೂಡ ಪಡೆಯಬಹುದು. ಒಂದು ವೇಳೆ ಈ ಪಾಲಿಸಿಯನ್ನು ಐದು ವರ್ಷಕ್ಕೂ ಮೊದಲೇ ಸ್ಥಗಿತಗೊಳಿಸಿದ್ರೆ ಬೋನಸ್ ಸೌಲಭ್ಯ ಸಿಗೋದಿಲ್ಲ.
ತಿಂಗಳಿಗೆ ಎಷ್ಟು ಹೂಡಿಕೆ ಮಾಡ್ಬೇಕು?
ಗ್ರಾಮ್ ಸುರಕ್ಷಾ ಯೋಜನೆ ಖಾತೆಗೆ(Account) ನೀವು ಪ್ರತಿ ತಿಂಗಳು 1500ರೂ. ಜಮೆ ಮಾಡೋದು ಕಡ್ಡಾಯ. ನೀವು ನಿರ್ದಿಷ್ಟ ಅವಧಿಗೆ ನಿರಂತರವಾಗಿ ಇಷ್ಟು ಮೊತ್ತವನ್ನು ಜಮೆ ಮಾಡಿದ್ರೆ 31ಲಕ್ಷ ರೂ.ನಿಂದ 35ಲಕ್ಷ ರೂ. ತನಕ ರಿಟರ್ನ್ಸ್ ಗಳಿಸಬಹುದು.
ಯಾವಾಗ ಎಂಡೋಮೆಂಟ್ ಪಾಲಿಸಿಯಾಗಿ ಪರಿವರ್ತಿಸಬಹುದು?
ಪಾಲಿಸಿದಾರರು ಈ ಪಾಲಿಸಿಯನ್ನು 59 ವರ್ಷ ವಯಸ್ಸಿನ ತನಕ ಎಂಡೋಮೆಂಟ್ ಪಾಲಿಸಿಯಾಗಿ ಪರಿವರ್ತಿಸಲು ಅವಕಾಶವಿದೆ. ಆದರೆ, ಈ ಮಾರ್ಪಾಡು ದಿನಾಂಕ ಮೆಚ್ಯುರಿಟಿ ಅವಧಿಯ ಒಂದು ವರ್ಷದೊಳಗೆ ಬರಬಾರದು. ಇನ್ನು ಎಂಡೋಮೆಂಟ್ ಪಾಲಿಸಿಗೆ ಪ್ರೀಮಿಯಂ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಬಹುದು. 55, 58, ಅಥವಾ 60ನೇ ವಯಸ್ಸಿನಲ್ಲಿ ಒಂದು ಪ್ರೀಮಿಯಂ ಪಾವತಿಸಬಹುದು. ಒಂದು ವೇಳೆ ಪಾಲಿಸಿ ಸರೆಂಡರ್ ಮಾಡಿದ್ರೆ ಭರವಸೆ ನೀಡಿರುವ ಕನಿಷ್ಠ ಮೊತ್ತದ ಮೇಲೆ ಬೋನಸ್ ನೀಡಲಾಗುತ್ತದೆ. ಇದು 1000ರೂ.ಮೇಲೆ ವಾರ್ಷಿಕ 60 ರೂ. ಆಗಿದೆ.
35ಲಕ್ಷ ರೂ. ಗಳಿಸಲು ಹೀಗೆ ಮಾಡಿ
ಒಬ್ಬ ವ್ಯಕ್ತಿ ಈ ಯೋಜನೆಯಲ್ಲಿ 19ನೇ ವಯಸ್ಸಿಗೆ ಹೂಡಿಕೆ ಮಾಡಲು ಪ್ರಾರಂಭಿಸುತ್ತಾನೆ ಎಂದು ಭಾವಿಸಿ. ಆತ 10ಲಕ್ಷ ರೂಪಾಯಿ ಪಾಲಿಸಿ ಕೊಳ್ಳುತ್ತಾನೆ. ಈ ಪಾಲಿಸಿಯ ಮಾಸಿಕ ಪ್ರೀಮಿಯಂ 55ವರ್ಷಕ್ಕೆ 1515ರೂ., 58 ವರ್ಷಕ್ಕೆ 1463ರೂ. ಹಾಗೂ 60 ವರ್ಷಕ್ಕೆ 1411ರೂ. ಆಗಿದೆ. ಈ ರೀತಿ ನೀವು ಹೂಡಿಕೆ ಮಾಡಿದ್ರೆ 55ನೇ ವಯಸ್ಸಿನಲ್ಲಿ ನಿಮಗೆ 31.60ಲಕ್ಷ ರೂ. ಸಿಗುತ್ತದೆ. 58 ವಯಸ್ಸಿನಲ್ಲಿ 33.40ಲಕ್ಷ ರೂ. ಹಾಗೂ 60ನೇ ವಯಸ್ಸಿನಲ್ಲಿ 34.60ಲಕ್ಷ ರೂ. ಸಿಗುತ್ತದೆ. ಅಂದ್ರೆ ದಿನಕ್ಕೆ ಬರೀ 50ರೂ. ಅಥವಾ ತಿಂಗಳಿಗೆ 1515ರೂ.ಹೂಡಿಕೆ ಮಾಡಿದ್ರೆ ನಿಮಗೆ 34.60ಲಕ್ಷ ರೂ. ಸಿಗುತ್ತದೆ.