ಶಿವಮೊಗ್ಗ: ರಾಜ್ಯದಲ್ಲಿ ಇರೋದು ಮುಸ್ಲಿಂ ಸರ್ಕಾರ, ಜಮೀರ್ ಅಹಮದ್ ಸರ್ಕಾರ ಎಂದು ಮಾಜಿ ಸಚಿವ ಕೆಎಸ್. ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇರೋದು ಕಾಂಗ್ರೆಸ್, ಸಿದ್ದರಾಮಯ್ಯ ಸರಕಾರ ಅನ್ನಲ್ಲ. ರಾಜ್ಯದಲ್ಲಿ ಇರೋದು ಮುಸ್ಲಿಂ ಸರಕಾರ, ಜಮೀರ್ ಅಹಮದ್ ಸರಕಾರ. ಮಠ ಮಾನ್ಯಗಳ ಆಸ್ತಿ, ದೇವಸ್ಥಾನದ ಆಸ್ತಿ ವಕ್ಪ್ ಅಂತಾ ಬರೆಸುತ್ತಾರಲ್ಲ ಎಷ್ಟು ಸೊಕ್ಕು ಇರಬೇಕು. ನಿಮ್ಮ ನೋಟೀಸ್ಗೆ ಏನು ಬೆಲೆ ಇದೆ? 2018ರಲ್ಲಿ ಯರಕಲ್ ಸಿದ್ದರಾಮ ಮಠಕ್ಕೆ ವಕ್ಫ್ ಆಸ್ತಿ ಅಂತಾ ನೋಟೀಸ್ ಕೊಟ್ಟಿದ್ದಾರೆ. ವಕ್ಪ್ ಅಧಿಕಾರಿಗಳಿಗೆ ಜಮೀರ್ ಅಹಮದ್ ಸಿಎಂ ಆಗಿದ್ದಾನೆ ಎಂದು ಕಿಡಿಕಾರಿದರು.
ಪಿಂಚಣಿದಾರರಿಗೆ ಗುಡ್ ನ್ಯೂಸ್: ಇನ್ನುಂದೆ ಮನೆಯಿಂದಲೇ “ಡಿಜಿಟಲ್ ಜೀವನ ಪ್ರಮಾಣ ಪತ್ರ” ಪಡೆಯಿರಿ!
ರಾಜ್ಯದಲ್ಲಿ ಸಾಂಕೇತಿಕವಾಗಿ ಹಿಂದುಪರ ವ್ಯಕ್ತಿಗಳು ಹೋರಾಟ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲದೇ ವಕ್ಫ್ನಿಂದ ರೈತರಿಗೆ ನೋಟೀಸ್ ಕೊಟ್ಟಿದ್ದಾರಾ? ಜಮೀರ್ ಅಹಮದ್ ಅವನು ಪಾಕಿಸ್ತಾನದಲ್ಲಿ ಇದ್ದಾನೋ, ಹಿಂದುಸ್ತಾನದಲ್ಲಿ ಇದ್ದಾನೋ? ಜಮೀರ್ ಅಹಮದ್ ಮಂತ್ರಿಯಾಗಲು ಅಯೋಗ್ಯ ಇದ್ದಾನೆ ಮೊದಲು ಅವನನ್ನು ಕಿತ್ತು ಬಿಸಾಕಿ. ಮಠ ಮಂದಿರ, ದೇವಸ್ಥಾನ, ಸಾಧು ಸಂತರ ಆಸ್ತಿ ವಾಪಸ್ ಕೊಡಿ. ಬೀರ ದೇವರು ಕುರುಬರ ದೇವರು ಅಲ್ವಾ? ದಲಿತರು, ಕುರುಬರು ನಿಮಗೆ ಓಟು ಹಾಕಿಲ್ವಾ? ರಾಷ್ಟ್ರ ದ್ರೋಹಿ ಜಮೀರ್ ಅಹಮದ್ ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು ಅಪ್ಪಿತಪ್ಪಿ ಹಿಂದುಸ್ತಾನದಲ್ಲಿ ಹುಟ್ಟಿದ್ದಾನೆ ಎಂದು ಆಕ್ರೋಶ ಹೊರ ಹಾಕಿದರು.