ಬೆಂಗಳೂರು:– ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಗೆ ಜಾಮೀನು ಸಿಕ್ಕಿದ್ದು, ಇದೇ ವಿಚಾರವಾಗಿ DCM ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
Male Mahadeshwara ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ! ದ್ವಿಚಕ್ರ ವಾಹನಗಳ ಪ್ರವೇಶ ನಿರ್ಬಂಧ
ಉಚ್ಛ ನ್ಯಾಯಾಲಯವು ಚಿತ್ರನಟ ದರ್ಶನ್ಗೆ ಷರತ್ತುಬದ್ಧ ಜಾಮೀನು ನೀಡಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ನ್ಯಾಯಾಲಯದ ತೀರ್ಪನ್ನು ತಾನು ಪ್ರಶ್ನಿಸುವ ಕೆಲಸ ತಾನು ಮಾಡಲ್ಲ, ನ್ಯಾಯಾಲಯದ ತೀರ್ಪನ್ನು ತಮ್ಮ ಸರ್ಕಾರ ಸ್ವಾಗತಿಸುತ್ತದೆ ಎಂದು ಹೇಳಿದರು.
ವಕ್ಫ್ ಬೋರ್ಡ್ ಜಮೀನು ಮತ್ತು ರೈತರಿಗೆ ನೀಡಿದ ನೋಟೀಸ್ಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಮತ್ತು ಕಂದಾಯ ಸಚಿವ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ, ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ರೈತರಿಗೆ ನೋಟೀಸ್ಗಳನ್ನು ನೀಡಲಾಗಿತ್ತು, ಈಗ ತಮ್ಮ ಸರ್ಕಾರ ನೀಡಿರುವ ನೋಟೀಸ್ಗಳನ್ನು ವಾಪಸ್ಸು ಪಡೆಯಲಾಗುವುದು, ರೈತರ ಜಮೀನುಗಳಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಹೇಳಿದರು.