ಮೊಳಕಾಲ್ಮೂರು : ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯಿಸಿ, ಭಟ್ರಹಳ್ಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು. ಪರಿಶಿಷ್ಟಜಾತಿ ಒಳಮೀಸಲಾತಿಯನ್ನು ಆಯಾ ಜನಸಂಖ್ಯಾವಾರು ಹಂಚಿಕೆ ಮಾಡಬೇಕೆಂದು ಹಲವಾರು ದಶಕಗಳಿಂದ ಹೋರಾಟ ನಡೆಸಿದ್ದು,3 ದಶಕದ ಹೋರಾಟದ ಫಲವಾಗಿ 2024 ಆಗಸ್ಟ್-1 ರಂದು ಸರ್ವೋಚ್ಚ ನ್ಯಾಯಲಯ ಒಳಮೀಸಲಾತಿಯನ್ನು ಜಾರಿ ಮಾಡಲು ಆಯಾ ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರ ಇದೆ ಎಂದು ತೀರ್ಪು ನೀಡಿದೆ,
ಆದರೆ, ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡದೆ ವಿಳಂಬ ಮಾಡುತ್ತಿದೆ. ಈಗಾಗಲೇ, ಸುಪ್ರೀಂ ಕೋರ್ಟ್ ಅಂಗೀಕಾರ ಮಾಡಿದ ಹಿನ್ನೆಲೆಯಲ್ಲಿ, ಪಕ್ಕದ ರಾಜ್ಯಗಳಾದ ತೆಲಂಗಾಣ ಮತ್ತು ಹರಿಯಾಣ ಸರ್ಕಾರಗಳು ಜಾರಿ ಮಾಡಿವೆ, ಆದರೆ, ರಾಜ್ಯ ಸರ್ಕಾರ ಸುಖಾಸುಮ್ಮನೆ ವಿಳಂಬ ಮಾಡುತ್ತಿದೆ ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಕರ್ನಾಟಕದಲ್ಲಿಯೂ ಸಹ ತ್ವರಿತವಾಗಿ ಜಾರಿಗೊಳಿಸಬೇಕು. ಅಲ್ಲದೆ, ಮೀಸಲಾತಿ ಜಾರಿಯಾಗುವವರೆಗೂ, ಸರ್ಕಾರದ ಎಲ್ಲಾ ನೇಮಕಾತಿಗಳನ್ನು ರದ್ದುಪಡಿಸಿ ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆ ಘನತೆಯನ್ನು ಕಪಾಡಿಕೊಳ್ಳುವ ಮೂಲಕ, ನಮಗೆ ದಕ್ಕಬೇಕಾದ ಮೌಲ್ಯಯುತ ಹಕ್ಕನ್ನು ನ್ಯಾಯುಯುತವಾಗಿ ಕೊಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಮೂಲಕ, ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಇದೇ ವೇಳೆ, ಡಾ.ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ, ಚಂದ್ರಣ್ಣ, ಭಟ್ರಹಳ್ಳಿ ಧನಂಜಯ, ನಾಗರಾಜ, ತಿಪ್ಪೇಸ್ವಾಮಿ, ಸೇರಿದಂತೆ ಇತರರು ಇದ್ದರು.