ಬೆಂಗಳೂರು:- ದೀಪಾವಳಿಗೂ ಮುನ್ನವೇ ಪಟಾಕಿ ದುರಂತ ಒಂದು ಸಂಭವಿಸಿದ್ದು, ಬೆಂಗಳೂರಿನಲ್ಲಿ ಮೊದಲ ಕಣ್ಣಿನ ಕೇಸ್ ದಾಖಲಾಗಿದೆ.
ದೀಪಾವಳಿ ಹಬ್ಬಕ್ಕೂ ಇನ್ನೂ ದಿನಗಳು ಬಾಕಿ ಇರುವಾಗಲೇ ಪಟಾಕಿ ಸಿಡಿಸಿ ಕಣ್ಣಿಗೆ ಹಾನಿ ಮಾಡಿಕೊಂಡಿರುವ ಘಟನೆ ಜರುಗಿದೆ.
ನಾಡಿನಾದ್ಯಂತ ಹಬ್ಬದ ಸಂಭ್ರಮದ ನಡುವೆ ಪಟಾಕಿ ಕೇಸ್ ದಾಖಲಾಗಿದೆ ಬೆಂಗಳೂರಿನ ಕಮ್ಮನಹಳ್ಳಿಯ 18 ವರ್ಷದ ಹುಡಗನಿಗೆ ಪಟಾಕಿಯಿಂದ ಕಣ್ಣಿಗೆ ಹಾನಿಯಾಗಿ ಮಿಂಟೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.
ಇನ್ನು ಪಟಾಕಿ ಕೇಸ್ ಬರ್ತಿದಂತೆ ಮಿಂಟೋ ಆಸ್ಪತ್ರೆ ಅಲರ್ಟ್ ಆಗಿದೆ. ಮಕ್ಕಳ ಪಟಾಕಿ ಪ್ರಕರಣ ಎದುರಿಸಲು ಪ್ರತ್ಯೇಕ ಬೆಡ್ ಸಿದ್ಧತೆ ಮಾಡಿದೆ. ಯುವಕರಿಗೆ 7 ಬೆಡ್, ಮಹಿಳೆಯರಿಗೆ 7 ಬೆಡ್ ಸೇರಿದಂತೆ ಒಟ್ಟು 25ಕ್ಕೂ ಹೆಚ್ಚು ಬೆಡ್ ಗಳನ್ನ ಮೀಸಲಿರಿಸಿದೆ.
ತುರ್ತು ಎಮೆರ್ಜೆನ್ಸಿಗೆ ಸರ್ಜರಿಗೆ ಬೇಕಾದ ಸಿದ್ಧತೆಗಳನ್ನ ಮಾಡಿಕೊಂಡಿದ್ದು, ಔಷಧಿಗಳನ್ನ ಐ ಡ್ರಾಪ್ಸ್ ಎಲ್ಲವೂ ವಾರ್ಡ್ ಗಳಲ್ಲಿ ಶೇಖರಿಸಿದೆ. ಮುಂದಿನ ಒಂದು ವಾರ 24*7 ವೈದ್ಯರು ಕೆಲಸ ನಿರ್ವಹಿಸಲಿದ್ದು ಮಿಂಟೋ ಪಟಾಕಿ ಪ್ರಕರಣ ಎದುರಿಸಲು ಸಿದ್ಧವಾಗಿದೆ. ತುರ್ತು ಸಹಾಯವಾಣಿ – 9481740137, 08026707176 ಶುರು ಮಾಡಿದ್ದು. ದೀಪಾವಳಿ ಹಬ್ಬದಲ್ಲಿನ ಕಣ್ಣಿನ ಸಮಸ್ಯೆ ಎದುರಿಸಲು ಮುನ್ನಚ್ಚರಿಕೆ ವಹಿಸವಂತೆ ಜನರಿಗೆ ತಿಳಿಸಿದೆ.