ಬೆಂಗಳೂರು:- ಕರ್ನಾಟಕದಲ್ಲಿ ಮೊದಲ ಬಾರಿ ಪುರುಷ ಮತದಾರರನ್ನು ಮಹಿಳೆಯರು ಮೀರಿಸಿದ್ದಾರೆ.
ಕರ್ನಾಟಕದ ಒಟ್ಟು 221 ವಿಧಾನಸಭಾ ಕ್ಷೇತ್ರಗಳ ಕರಡು ಪಟ್ಟಿಯ ಪ್ರಕಾರ, ಮಹಿಳೆಯರು 2.72 ಕೋಟಿ ಮಹಿಳಾ ಮತದಾರರಿದ್ದರೆ, 2.71 ಕೋಟಿ ಪುರುಷ ಮತದಾರರಿದ್ದಾರೆ. 5,022 ತೃತೀಯ ಲಿಂಗಿ ಮತದಾರರಿದ್ದಾರೆ.
ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ: ಯಲಹಂಕ ಸುತ್ತಮುತ್ತ ಹೆಜ್ಜೆ ಗುರುತು ಪತ್ತೆ!
ನವೆಂಬರ್ 13 ರಂದು ಉಪಚುನಾವಣೆ ನಡೆಯಲಿರುವ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳ ಮತದಾರರ ವಿವರನ್ನು ಕರಡು ಪಟ್ಟಿ ಒಳಗೊಂಡಿಲ್ಲ. ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ದೇಶನದಂತೆ ಈ ಮೂರು ಕ್ಷೇತ್ರಗಳ ಮತದಾರರ ಪಟ್ಟಿಯ ಸಾರಾಂಶ ಪರಿಷ್ಕರಣೆಯನ್ನು ತಡೆಹಿಡಿಯಲಾಗಿದೆ.
ಆದಾಗ್ಯೂ, ಅಸ್ತಿತ್ವದಲ್ಲಿರುವ ಮಾಹಿತಿಯ ಪ್ರಕಾರ, ಆ ಮೂರು ಕ್ಷೇತ್ರಗಳ ಆಯಾ ಅಂಕಿಅಂಶಗಳನ್ನು ಸೇರಿಸಿದರೂ ಸಹ ಪುರುಷರಿಗಿಂತ 36,462 ಮಹಿಳಾ ಮತದಾರರು ಹೆಚ್ಚಿದ್ದಾರೆ ಎಂದು ವರದಿಯಾಗಿದೆ. ಈವರೆಗೆ ಕರಾವಳಿ ಪ್ರದೇಶದಲ್ಲಷ್ಟೇ ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರ ಸಂಖ್ಯೆಗಿಂತ ಹೆಚ್ಚಾಗಿತ್ತು. ಆದರೆ, ಇದೀಗ ರಾಜ್ಯದಲ್ಲೇ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ.
ಈ ಅಂಕಿಅಂಶಗಳು ಸಂಭಾವ್ಯವಾಗಿ ಚುನಾವಣೆಗಳಲ್ಲಿ ಮಹತ್ವ ಪಡೆಯಬಹದು. ವಿವಿಧ ಪಕ್ಷಗಳ ರಾಜಕೀಯ ಲೆಕ್ಕಾಚಾರಗಳನ್ನು ಬದಲಾಯಿಸಬಹುದು ಮತ್ತು ಅವರ ಕಾರ್ಯತಂತ್ರವನ್ನು ಮರು ರೂಪಿಸಲು ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಮಹಿಳಾ ಮತದಾರರು ಹೆಚ್ಚು ಎಂಬ ಅಂಶ ನೇರವಾಗಿ ಚುನಾವಣಾ ಡೈನಾಮಿಕ್ಸ್ ಅನ್ನು ಬದಲಾಯಿಸುವುದಿಲ್ಲ. ಆದರೆ ಲಿಂಗ ಅಂಶವು ಚುನಾವಣಾ ಪರಿಗಣನೆಗೆ ಬಂದೇ ಬರುತ್ತದೆ. ಹಿಂದಿನ ಚುನಾವಣೆಗಳಲ್ಲಿಯೂ ಸಹ, ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದ ಹಲವು ಕ್ಷೇತ್ರಗಳಿವೆ. ಹೆಚ್ಚಿನ ಮಹಿಳೆಯರ ಪಾಲ್ಗೊಳ್ಳುವಿಕೆಯ ಮಾದರಿಯು ಯಾವಾಗಲೂ ಕಂಡುಬಂದಿದೆ ಎಂದು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಉದ್ಯೋಗಕ್ಕಾಗಿ ಹೊರ ರಾಜ್ಯಗಳಿಗೆ ಪುರುಷರ ವಲಸೆ ಹೆಚ್ಚಾಗಿರುವುದು ಕೂಡ ಮಹಿಳಾ ಮತದಾರರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗಲು ಕಾರಣ ಇರಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (ಸಿಇಒ) ಪ್ರಕಟಿಸಿರುವ ಮತದಾರರ ಕರಡು ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚು ಇರುವ ಸುಳಿವು ದೊರೆತಿದೆ. ಆದಾಗ್ಯೂ, ಉಪಚುನಾವಣೆ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಮತದಾರರ ವಿವರವನ್ನು ಕರಡು ಪಟ್ಟಿ ಒಳಗೊಳ್ಳದೇ ಇರುವುದರಿಂದ ಮಹಿಳಾ ಮತದಾರರೇ ಹೆಚ್ಚು ಎಂದು ಅಧಿಕೃತವಾಗಿ ಹೇಳಲಾಗದು. ಆದರೆ, ಅಂಕಿಅಂಶಗಳಿಂದಾಗಿ ಮಹಿಳಾ ಮತದಾರರೇ ಹೆಚ್ಚಿರುವ ನಿರೀಕ್ಷೆ ದಟ್ಟವಾಗಿದೆ.