ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಚಿರತೆ ಭೀತಿ ಶುರುವಾಗಿದೆ. ಹೀಗಾಗಿ ಈ ಭಾಗದ ಜನ ಹೆಚ್ಚು ಭಯಭೀತರಾಗಿದ್ದು, ರಾತ್ರಿ ಓಡಾಡಲು ಕೂಡ ಕಷ್ಟ ಪಡುತ್ತಿದ್ದಾರೆ.
ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಅಪಪ್ರಚಾರ: ಸಚಿವ ಜಮೀರ್
ಎಸ್, ಯಲಹಂಕ ವಿಮಾನ ನಿಲ್ದಾಣದ ಸುತ್ತಾ ಮುತ್ತಾ ಮತ್ತೆ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆ ಅಲ್ಲಿನ ಜನರಲ್ಲಿ ಭಯ ಹುಟ್ಟಿಸಿದೆ.
ಯಲಹಂಕ ತಾಲೂಕಿನ ನೆಲ್ಲುಕುಂಟೆ ಗ್ರಾಮದಲ್ಲಿರೊ ಇದೇ ಗೋಡೆಯ ಮೇಲೆ ಚಿರತೆ ಹೆಜ್ಜೆ ಹಾಕಿತ್ತು. ಅದೇ ಚಿರತೆಯ ದೃಶ್ಯ ಪಕ್ಕದಲ್ಲೇ ನಿರ್ಮಾಣ ಆಗ್ತಿರೊ ಕಟ್ಟಡದಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ. ಆ ದೃಶ್ಯ ವೈರಲ್ ಆಗುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಹುಟ್ಟು ಹಾಕಿದೆ. ಏರ್ಪೋರ್ಟ್ ರಸ್ತೆಯ ಹುಣಸೆಮಾರನಹಳ್ಳಿ, ನೆಲ್ಲುಕುಂಟೆ, ಗಂಡಿಗೆನಹಳ್ಳಿ ಜನರು ಘಟನೆಯಿಂದ ತಲ್ಲಣಗೊಂಡಿದ್ದಾರೆ.
ತಕ್ಷಣ ಅಲರ್ಟ್ ಆದ ಸ್ಥಳೀಯರು, ಯಲಹಂಕ ವಲಯ ಅರಣ್ಯಾಧಿಕಾರಿಗಳಿಗೆ ವಿಚಾರ ತಿಳಿಸಿದ್ದು, ಇಂದಿನಿಂದ ಚಿರತೆ ಸೆರೆಹಿಡಿಯೊ ಕಾರ್ಯಾಚರಣೆಯ ಭರವಸೆ ನೀಡಿದ್ದಾರೆ.