ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಗೋವಾ ಮದ್ಯ ಪತ್ತೆಯಾಗಿದೆ. ವ್ಯಕ್ತಿಯೋರ್ವ ಕಡಿಮೆ ಬೆಲೆಗೆ ಗೋವಾದಲ್ಲಿ ಮದ್ಯ ಖರೀದಿ ಮಾಡಿ ಅದನ್ನು ಬೆಂಗಳೂರಿನಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದ. ಇದರ ಖಚಿತ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ಮದ್ಯದ ಜೊತೆಗೆ ಆತನನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿಯಿಂದ 5 ಲಕ್ಷ ಮೌಲ್ಯದ 144 ಬಾಟಲಿಯನ್ನು ಸೀಜ್ ಮಾಡಿ ಮಾಡಿದ್ದಾರೆ.
ಪುರುಷೋತ್ತಮ್ ಬಂಧಿತ ಆರೋಪಿ ಆಗಿದ್ದು, ಈತ ಕತ್ರಿಗುಪ್ಪೆ ನಿವಾಸಿ ಎನ್ನಲಾಗಿದೆ. ಆರೋಪಿ ಪುರುಷೋತ್ತಮ್ ಗೋವಾದಿಂದ ಕಡಿಮೆ ಬೆಲೆಗೆ ಮದ್ಯ ತರಿಸಿಕೊಳ್ಳುತ್ತಿದ್ದ. ಗೋವಾದಲ್ಲಿರುವ ಅಂಗಡಿಯವರ ಸಂಪರ್ಕದ ಮೇರೆಗೆ ಬೆಂಗಳೂರಿಗೆ ಮದ್ಯ ತರಿಸಿಕೊಳ್ಳುತ್ತಿದ್ದ.
ತನಗೆ ಬೇಕಾದಾಗಲೆಲ್ಲಾ ತಿಳಿಸಿ ಬಸ್ನಲ್ಲಿ ಮದ್ಯದ ಬಾಟಲ್ ಇಡುವಂತೆ ಹೇಳುತ್ತಿದ್ದ. ಬಳಿಕ ಇಲ್ಲಿಗೆ ಬರುತ್ತಿದ್ದಂತೆ ಇಳಿಸಿಕೊಳ್ಳುತ್ತಿದ್ದ. ನಂತರ ಮನೆಗೆ ತೆಗೆದುಕೊಂಡು ಹೋಗಿ ಸ್ಟಾಕ್ ಮಾಡುತ್ತಿದ್ದ. ಇದನ್ನು ಕಡಿಮೆ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ.
ಅ.27 ರಂದು ಪುರುಷೋತ್ತಮ್ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಬನಶಂಕರಿ ಎರಡನೇ ಹಂತದಲ್ಲಿ ನಿಂತಿದ್ದ. ಆತನ ಚಲನವಲನ ಅಬಕಾರಿ ಅಧಿಕಾರಿಗಳಿಗೆ ಅನುಮಾನ ಹುಟ್ಟಿಸಿತ್ತು. ಈ ವೇಳೆ ಬ್ಯಾಗ್ ತೆಗೆದು ಪರಿಶೀಲಿಸಿದಾಗ ಮದ್ಯದ ಬಾಟಲ್ ಪತ್ತೆಯಾಗಿದೆ. ಬಾಟಲ್ ಮೇಲೆ ಫಾರ್ ಸೇಲ್ ಇನ್ ಗೋವಾ ಓನ್ಲಿ ಎಂದು ನಮೂದಾಗಿದ್ದು ಕಂಡು ಅವುಗಳು ಗೋವಾದಲ್ಲಿ ತಯಾರಿಸಲಾಗಿದ್ದ ಮದ್ಯದ ಬಾಟಲ್ ಎಂದು ತಿಳಿದಿದೆ.
ಬಳಿಕ ಆತನ ಮೊಬೈಲ್ ಪರಿಶೀಲಿಸಿದಾಗ ಗೋವಾ ರಾಜ್ಯದ ಮದ್ಯದ ಅಂಗಡಿ ಜೊತೆಗಿನ ನಂಟು ಬಯಲಾಗಿದೆ. ಜೊತೆಗೆ ಮದ್ಯ ತರಿಸಿದ್ದ ಬಿಲ್ಲುಗಳು ಕೂಡ ಪತ್ತೆಯಾಗಿದೆ. ನಂತರ ಕತ್ರಿಗುಪ್ಪೆ ಮನೆಗೆ ಕರೆದೊಯ್ದು ಶೋಧಿಸಿದಾಗ ಅಕ್ರಮ ಮದ್ಯದ ಬಾಟಲ್ಗಳು ಇರುವುದು ತಿಳಿದುಬಂದಿದೆ. ಕೂಡಲೇ ಆತನನ್ನು ಅಬಕಾರಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.