ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಪವರ್ ಕಟ್ ಇರಲಿದೆ. ಈ ಕುರಿತು ಬೆಸ್ಕಾಂ ಅಧಿಕೃತ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಳ್ಳಲಾಗಿದೆ.
Priyank Kharge: ರೈತರ ಜಾಗ ಸರ್ಕಾರ ವಾಪಸ್ ಪಡೆಯೊಲ್ಲ: ಪ್ರಿಯಾಂಕ್ ಖರ್ಗೆ
ಕೆಪಿಟಿಸಿಎಲ್ ಪೂರ್ವಾಂಕರ ಪಾಮ್ ಬೀಚ್ ಸ್ಟೇಷನ್ನಲ್ಲಿ ತುರ್ತುನಿರ್ವಹಣಾ ಕೆಲಸ ಇರುವುದರಿಂದ ನಗರದ ಕೆಲವು ಸ್ಥಳಗಳಲ್ಲಿ ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಹಳೇಹಳ್ಳಿ, ಮಾರ್ಗೊಂಡನಹಳ್ಳಿ, ಗವಿಗುಡಿ, ಕಲ್ಕೆರೆ ರಸ್ತೆ, ಬೈರತಿ ಗ್ರಾಮ, ಕನಕಶ್ರೀ ಲೇಔಟ್, ವಿದ್ಯಾನಗರ, ಕೆಆರ್ಸಿಟಿ ಬಸ್ ನಿಲ್ದಾಣ, ಬೈರತಿ, ಗುಬ್ಬಿ ಅಡ್ಡರಸ್ತೆ, ಬೈರತಿ ಬಂಡೆ, ಕ್ಯಾಲಸನಹಳ್ಳಿ, ಪೂರ್ವಾಂಕರ ಆಪಾರ್ಟ್ ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.
ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3.30 ರವರೆಗೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅನಾನುಕೂಲಕ್ಕಾಗಿ ವಿಷಾದಿಸಲಾಗುತ್ತಿದೆ ಎಂದು ಬೆಸ್ಕಾಂ ಹೇಳಿದೆ.