ಬೆಂಗಳೂರು:- ನುಂಗುಬಾಕರನ್ನು ಸರ್ಕಾರ ಬೆಂಬಲಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನುಂಗುಬಾಕರನ್ನು ಸರ್ಕಾರ ಬೆಂಬಲಿಸುತ್ತಿದೆ. ಲವ್ ಜಿಹಾದ್ ರೀತಿಯಲ್ಲಿ ಈ ಸರ್ಕಾರ `ಲ್ಯಾಂಡ್ ಜಿಹಾದ್’ ನಡೆಸುತ್ತಿದೆ. ಕೆಲವು ಸಚಿವರು ವಕ್ಫ್ನಿಂದ ನೊಟೀಸ್ ಕೊಟ್ಟಿಲ್ಲ ಅಂತಿದ್ದಾರೆ. ಆದರೆ ರೈತರ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಆಸ್ತಿ ಅಂತ ರಿಜಿಸ್ಟರ್ ಮಾಡಲಾಗಿದೆ. ಲವ್ ಜಿಹಾದ್ ರೀತಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಲ್ಯಾಂಡ್ ಜಿಹಾದ್ ನಡೆಸುತ್ತಿದೆ. ಅನ್ವರ್ ಮಾನಪ್ಪಾಡಿ ವರದಿಯಲ್ಲಿ ಮುಸ್ಲಿಮ್ ನಾಯಕರು ವಕ್ಫ್ ಆಸ್ತಿ ಕಬಳಿಸಿರೋ ಉಲ್ಲೇಖ ಇದೆ ಎಂದು ಹೇಳಿದರು.
ಅಲ್ಲಿ ಸಂಸತ್ ನಮ್ದೇ ಅಂತಿದ್ದಾರೆ, ಇಲ್ಲಿ ವಿಧಾನಸೌಧವೂ ನಮ್ದೇ ಅಂತಿದ್ದಾರೆ. ಇದೇನು ಹುಚ್ಚರಾಟನಾ? ಕಾಂಗ್ರೆಸ್ ಬಂದರೆ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ಸಿಗುತ್ತದೆ. ವಕ್ಫ್ ಬೋರ್ಡ್ನ ಲೂಟಿ ಮಾಡಿರುವ ಮುಸ್ಲಿಂ ನಾಯಕರೇ, ಈಗ ರೈತರ ಜಮೀನು ನುಂಗಲು ಹೊರಟಿದ್ದಾರೆ. ಈ ನುಂಗುಬಾಕರನ್ನು ಸರ್ಕಾರ ಬೆಂಬಲಿಸುತ್ತಿದೆ. ಇದುವರೆಗೆ ಸಿಎಂ, ಡಿಸಿಎಂ ವಕ್ಫ್ ಆಸ್ತಿಗಳ ಬಗ್ಗೆ ಬಾಯಿ ಬಿಟ್ಟಿಲ್ಲ, ಸಿಎಂ, ಡಿಸಿಎಂ ಮಾತಾಡಲಿ, ಯಾದಗಿರಿ, ಧಾರವಾಡಗಳಲ್ಲೂ ಈ ಸಮಸ್ಯೆ ಎದುರಾಗಿದೆ ಎಂದರು.
ಇರಾನ್ನಿಂದ ಇವರು ಜಮೀನು ತಂದಿದ್ರಾ? ಇರಾನ್, ಇರಾಕ್ಗಳಿಂದ ಜಮೀನು ಶಿಫ್ಟ್ ಮಾಡ್ಕೊಂಡು ಬಂದಿದ್ರಾ? ಜೆಸಿಬಿಯಿಂದ ತಂದಿದ್ರಾ? ಸಿಕ್ಕಿದ ಕಡೆ ಎಲ್ಲ ನಮ್ದೇ ಅಂತಿದ್ದಾರೆ, ಕೆಲ ಮುಸ್ಲಿಂ ಅಧಿಕಾರಿಗಳು ಖಬರಸ್ಥಾನ ಅಂತ ವಕ್ಫ್ ಗೆ ಸೇರಿಸಿಕೊಳ್ತಾರೆ. ಬಿಜೆಪಿ ಕಾಲದಲ್ಲಿ ಅಕ್ರಮ ಆಗಿದ್ರೂ ಕ್ರಮ ಕೈಗೊಳ್ಳಲಿ, ಜೈಲಿಗೆ ಹಾಕಲಿ, ರೈತರ ಶಾಪಕ್ಕೆ ಈ ಸರ್ಕಾರ ಗುರಿಯಾಗಿದೆ ಎಂದು ಆರ್ ಅಶೋಕ್ ಹರಿಹಾಯ್ದರು.