ಹೈದರಾಬಾದ್:- ಮೊಮೊಸ್ ತಿಂದ ಮಹಿಳೆ ಸಾವನ್ನಪ್ಪಿದ್ದು, 20 ಜನ ಅಸ್ವಸ್ಥಗೊಂಡ ಘಟನೆ ಹೈದರಾಬಾದ್ನ ಬಂಜಾರ ಹಿಲ್ಸ್ ಬಳಿ ಫುಡ್ ಸ್ಟಾಲ್ನಲ್ಲಿ ಜರುಗಿದೆ.
ಎಸಿ ಸರಿಯಾಗಿ ವರ್ಕ್ ಆಗ್ತಿಲ್ಲ ಎಂದು ರೈಲ್ವೇ ಚೈನ್ ಎಳೆದ ಪ್ರಯಾಣಿಕನಿಗೆ ಪೊಲೀಸರಿಂದ ಗೂಸಾ!
ಘಟನೆ ಸಂಬಂಧ ಸದ್ಯ ತನಿಖೆ ನಡೆಯುತ್ತಿದೆ. “ಮೃತ ಮಹಿಳೆ ಮತ್ತು ಆಸ್ವಸ್ಥಗೊಂಡವರು ‘ದೆಹಲಿ ಮೊಮೊಸ್’ ಹೆಸರಿನ ಫುಡ್ ಸ್ಟಾಲ್ನಿಂದ ಮೊಮೊಸ್ ಸೇವಿಸಿದ್ದಾರೆ. ಚಿಂತಲ್ ಬಸ್ತಿಯಲ್ಲಿರುವ ಈ ಸ್ಟಾಲ್ ಅನ್ನು ಮೂರು ತಿಂಗಳ ಹಿಂದೆ ಬಿಹಾರದಿಂದ ಬಂದ ಆರು ಸೇರಿ ಪ್ರಾರಂಭಿಸಿದ್ದರು. ಸ್ಟಾಲ್ ನಡೆಸುತ್ತಿದ್ದವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಮೊಮೊಸ್ ತಿಂದ ಒಂದು ಗಂಟೆಯ ನಂತರ ಮಹಿಳೆ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದು, ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಮಹಿಳೆ ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮಾರಾಟಗಾರರ ಕಾರ್ಯಾಚರಣೆಗಳ ಬಗ್ಗೆ ತನಿಖೆ ಆರಂಭಿಸಿದ್ದು, ಈ ವೇಳೆ ಮಾನ್ಯ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ತಿಳಿದುಬಂದಿದೆ.