ಲಕ್ನೋ:- ಎಸಿ ಸರಿಯಾಗಿ ಕೂಲಿಂಗ್ ಆಗ್ತಿಲ್ಲ ಎಂದು ದೂರು ನೀಡಿದ್ರೂ ಇದಕ್ಕೆ ಯಾರು ಸ್ಪಂದಿಸಿಲ್ಲ ಎಂದು ಪ್ರಯಾಣಿಕರೊಬ್ಬರು ಚೈನ್ ಎಳೆದಿದ್ದಾರೆ. ಇದರಿಂದ ಕೋಪಗೊಂಡ ಆರ್ಪಿಎಫ್ ಸಿಬ್ಬಂದಿ ಪ್ರಯಾಣಿಕನ್ನು ರೈಲಿನಿಂದ ದರದರನೇ ಎಳೆದೊಯ್ದಿದ್ದಾರೆ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಲಕ್ನೋದಲ್ಲಿ ಘಟನೆ ಜರುಗಿದೆ. ಪಾಟ್ನಾ-ಕೋಟಾ ಎಕ್ಸ್ಪ್ರೆಸ್ 13237 ರೈಲಿನ ಎಸಿ ಕೋಚ್ ಬಿ-6 ನಲ್ಲಿ ಪ್ರಯಾಣಿಸುತ್ತಿದ್ದ ಅನಂತ್ ಪಾಂಡೆ ಎಂಬವರು ಎಸಿ ಸರಿಯಾಗಿ ವರ್ಕ್ ಆಗ್ತಿಲ್ಲ ಎಂದು ಸಿಬ್ಬಂದಿಗಳಿಗೆ ದೂರನ್ನು ನೀಡುತ್ತಾರೆ. ಆದರೆ ಸಿಬ್ಬಂದಿಗಳು ದೂರು ನೀಡಿದ್ರೂ ಕ್ಯಾರೆ ಅನ್ನಲಿಲ್ಲ. ಇದರಿಂದ ಕೋಪಗೊಂಡ ಅನಂತ್ ರೈಲು ಆಯೋಧ್ಯೆಯಿಂದ ಹೊರಟಾಗ ಚೈನ್ ಎಳೆದಿದ್ದಾರೆ. ಅದರ ಬಳಿಕವೂ ವಿಚಾರಣೆಗೆ ಬರದಿದ್ದಾಗ ಇನ್ನೂ ಎರಡು ಬಾರಿ ಚೈನ್ ಎಳೆದಿದ್ದಾರೆ. ಇದರಿಂದ ಕೋಪಗೊಂಡ ರೈಲ್ವೇ ಪೊಲೀಸರು ರೈಲು ಚಾರ್ಬಾಗ್ ರೈಲು ನಿಲ್ದಾಣ ತಲುಪಿದಾಗ ನನ್ನನ್ನು ದರದರನೇ ಎಳೆದೊಯ್ದು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಅನಂತ್ ಪಾಂಡೆ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಲಕ್ನೋ ವಿಭಾಗದ ಆರ್ಪಿಎಫ್ ಕಮಾಂಡೆಂಟ್ ದೇವಾಂಶ್ ಶುಕ್ಲಾ “ಪಾಟ್ನಾ ಕೋಟಾ ಎಕ್ಸ್ಪ್ರೆಸ್ನಲ್ಲಿ ಬರುತ್ತಿದ್ದ ಪ್ರಯಾಣಿಕ ಅನಂತ್ ಪಾಂಡೆ ಮೂರು ಬಾರಿ ಚೈನ್ ಎಳೆದು ನಿಲ್ಲಿಸಿದರು. ಇದು ಆರ್ಪಿಎಫ್ ಕಾಯ್ದೆಯಡಿ ಅಪರಾಧದ ವರ್ಗಕ್ಕೆ ಸೇರುತ್ತದೆ. ಈ ಬಗ್ಗೆ ಆ ಪ್ರಯಾಣಿಕಣಿಗೂ ವಿವರಿಸಲಾಯಿತು ಮತ್ತು ಚಾರ್ಬಾಗ್ನಲ್ಲಿ ಚೈನ್ ಎಳೆದಿದ್ದಕ್ಕಾಗಿ ಸೆಕ್ಷನ್ 141 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು, ಇದೀಗ ಆ ವ್ಯಕ್ತಿ ರೈಲ್ವೆ ನ್ಯಾಯಾಲಯದಿಂದ ಜಾಮೀನು ಪಡೆದಿದ್ದು, ಆ ಪ್ರಯಾಣಿಕನನ್ನು ಎಳೆದೊಯ್ದದ್ದಿದ್ದಾರೆಯೇ ಹೊರತು ಆತನ ಮೇಲೆ ಆರ್ಪಿಎಫ್ ಸಿಬ್ಬಂದಿ ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ” ಎಂದು ಹೇಳಿದ್ದಾರೆ.