ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಬಾಂಗ್ಲಾದೇಶದ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಅವಧಿಯಲ್ಲೂ ರೈತರಿಗೆ ವಕ್ಫ್ ನೋಟಿಸ್ ಕೊಡಲಾಗಿತ್ತು: MB ಪಾಟೀಲ್!
38 ವರ್ಷದ ರಹಮಾನ್ ಶೈಕ್ ಬಂಧಿತ ವಿದೇಶಿ ಪ್ರಜೆ. ರಹಮಾನ್ ಶೈಕ್ ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನ ಚನ್ನಸಂದ್ರದಲ್ಲಿ ನೆಲಸಿದ್ದು, ಕಸ ವಿಂಗಡಣೆ ಘಟಕದಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ರಹಮಾನ್ ಶೈಕ್ ನಕಲಿ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿಯನ್ನು ಸಹ ಹೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿರುವ ರಹಮಾನ್ ಶೈಕ್ ಮೊದಲ ಪತ್ನಿ, ಪತಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು. ತನ್ನ ಪತಿ ರಹಮಾನ್ ಶೈಕ್ ವೈದ್ಯಕೀಯ ವೀಸಾದ ಮೇಲೆ ಭಾರತಕ್ಕೆ ತೆರಳಿದ್ದು, ಹಿಂದಿರುಗಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ವಿಚಾರ ತಿಳಿದು, ಬಾಂಗ್ಲಾದೇಶ ಪೊಲೀಸರು ಭಾರತದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಪೊಲೀಸರು ತನಿಖೆ ನಡೆಸಿ 2023ರಲ್ಲಿ ರಹಮಾನ್ ಶೈಕ್ನನ್ನು ಬಂಧಿಸಿದ್ದರು. ರಹಮಾನ್ ಶೈಕ್ ಬಳಿ ಮಾನ್ಯ ವೀಸಾ ಮತ್ತು ಪಾಸ್ಪೋರ್ಟ್ ಇಲ್ಲದೆ ಇರುವುದು ಪೊಲೀಸರಿಗೆ ತಿಳಿದಿದೆ. ಈ ವಿಚಾರವನ್ನು ಪೊಲೀಸರು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ. ಆದರೆ, ರಹಮಾನ್ ಶೈಕ್ ಶಸ್ತ್ರಚಿಕಿತ್ಸಾ ಕಾರಣ ನೀಡಿ ನ್ಯಾಯಾಲಯದಿಂದ ಅನುಮತಿ ಪಡೆದ ಹೊರ ಬಂದಿದ್ದಾನೆ.
ಬಿಡುಗಡೆಯ ನಂತರ, ಅವರು ತಮ್ಮ ಎರಡನೇ ಹೆಂಡತಿಯೊಂದಿಗೆ ವಾಸಿಸುತ್ತಿದ್ದನು. ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.