ಅನೇಕರಿಗೆ ಲಕ್ಷ್ಮಿ ದೇವಿಯನ್ನು ಪೂಜಿಸುವ ಆಸೆಯಿರುತ್ತದೆ. ಆದರೆ, ಆಕೆಯನ್ನು ಒಲಿಸಿಕೊಳ್ಳುವುದು ಕಠಿಣವೆಂದು ಬಿಟ್ಟು ಬಿಡುತ್ತಾರೆ. ನಿಮಗೂ ಹೀಗೆ ಆಗುತ್ತಿದ್ದರೆ ಈ ಸರಳ ವಿಧಾನದ ಮೂಲಕ ಲಕ್ಷ್ಮಿಯನ್ನು ಆರಾಧಿಸಿ. ಲಕ್ಷ್ಮಿ ಪೂಜೆಯನ್ನು ಮಾಡುವ ಸರಳ ವಿಧಾನ ಯಾವುದು.? ಲಕ್ಷ್ಮಿ ದೇವಿಯನ್ನು ಸರಳ ರೀತಿಯಲ್ಲಿ ಹೀಗೆ ಪೂಜಿಸಿ.
CM ಸಿದ್ದುಗೆ ಟೆನ್ಷನ್, ಟೆನ್ಷನ್: ಮುಡಾ ಮಾಜಿ ಆಯುಕ್ತರ ಮನೆ ಮೇಲೆ ಇಡಿ ದಾಳಿ!
ಲಕ್ಷ್ಮೀ ಪೂಜೆ ಮಾಡುವಾಗ ರಾಶಿ ಪ್ರಕಾರ ಈ ರೀತಿ ಉಡುಗೆ ಇರಲಿ: ದುಡ್ಡಿನ ರಾಶಿಯೇ ತುಂಬಿ ತುಳುಕತ್ತೆ!
ನೀವು ಲಕ್ಷ್ಮಿ ಪೂಜೆ ಮಾಡುವಾಗ ಕೆಲವೊಂದು ನಿಯಮ ಪಾಲಿಸಿದ್ರೆ ಮಾತ್ರ ಲಕ್ಷ್ಮೀ ಕೃಪೆ ಸಿಗಲು ಸಾಧ್ಯ. ಅದರಂತೆ ನಿಮ್ಮ ರಾಶಿ ಪ್ರಕಾರ ಹೀಗೆ ಮಾಡಿದ್ರೆ ಹಣದ ಹೊಳೆಯೋ ಹರಿಯುತ್ತದೆ.
ಮೇಷ ರಾಶಿ: ಮೇಷ ರಾಶಿಯನ್ನ ಗ್ರಹಗಳ ಕಮಾಂಡರ್ ಮಂಗಳ ಆಳುತ್ತದೆ. ಹಾಗಾಗಿ ಈ ದಿನ ಮಹಿಳೆಯರು ಲಕ್ಷ್ಮಿ ಪೂಜೆ ಮಾಡಲು ತಪ್ಪದೇ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬೇಕು ಎನ್ನಲಾಗುತ್ತದೆ. ಈ ಬಣ್ಣದ ಬಟ್ಟೆಗಳನ್ನ ಧರಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ, ಇದರ ಜೊತೆಗೆ ನಂಬಿಕೆಗಳ ಪ್ರಕಾರ ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ವೃಷಭ ರಾಶಿ: ವೃಷಭ ರಾಶಿಯನ್ನ ಸಂಪತ್ತಿನ ಗ್ರಹ ಶುಕ್ರ ಆಳುತ್ತದೆ. ಲಕ್ಷ್ಮಿಯನ್ನ ಸಹ ಸಂಪತ್ತಿನ ದೇವತೆ ಎನ್ನಲಾಗುತ್ತದೆ. ಹಾಗಾಗಿ ಈ ರಾಶಿಯ ಜನರು ದೀಪಾವಳಿಯ ದಿನ ಲಕ್ಷ್ಮಿ ಪೂಜೆಯ ಸಮಯದಲ್ಲಿ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಬಹಳ ಶುಭ ಎನ್ನಲಾಗುತ್ತದೆ. ಈ ಬಣ್ಣವು ನಿಮ್ಮ ಜೀವನದಲ್ಲಿ ಸಂತೋಷವನ್ನ ಹೆಚ್ಚಿಸುತ್ತದೆ. ಇದರ ಜೊತೆಗೆ ಆರ್ಥಿಕ ಸಮಸ್ಯೆಗಳಿಂದ ಸಹ ಮುಕ್ತಿ ಪಡೆಯಬಹುದು
ಮಿಥುನ ರಾಶಿ: ಮಿಥುನ ರಾಶಿಯನ್ನ ಬುಧ ಆಳುತ್ತದೆ. ಈ ರಾಶಿಯ ಜನರು ದೀಪಾವಳಿಯ ದಿನ ಕಿತ್ತಳೆ ಬಣ್ಣದ ಬಟ್ಟೆಯನ್ನ ಧರಿಸಿದರೆ, ತುಂಬಾ ಮಂಗಳಕರ ಫಲಗಳು ಸಿಗುತ್ತದೆ. ನಂಬಿಕೆಗಳ ಪ್ರಕಾರ ಕಿತ್ತಳೆ ಬಣ್ಣವು ಹಣವನ್ನು ಆಕರ್ಷಿಸುತ್ತದೆ. ಮಿಥುನ ರಾಶಿಯವರು ದೀಪಾವಳಿಯಂದು ಕಿತ್ತಳೆಯನ್ನು ಧರಿಸುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ.
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯನ್ನ ಚಂದ್ರ ಆಳುತ್ತದೆ. ಈ ರಾಶಿಯ ಜನರು ದೀಪಾವಳಿ ಸಮಯದಲ್ಲಿ ಪೂಜೆ ಮಾಡುವಾಗ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಕಟಕ ರಾಶಿಯವರಿಗೆ ಹಸಿರು ಬಣ್ಣ ಅತ್ಯಂತ ಮಂಗಳಕರವಾಗಿದ್ದು, ಇದರಿಂದ ಅನೇಕ ಒಳ್ಳೆಯ ಫಲಗಳು ಸಿಗಲಿದೆ.
ಸಿಂಹ ರಾಶಿ: ಗ್ರಹಗಳ ರಾಜನಾದ ಸೂರ್ಯ ಸಿಂಹ ರಾಶಿಯನ್ನ ಆಳುತ್ತಾನೆ. ಹಾಗಾಗಿ ಈ ದಿನ ಪೂಜೆ ಮಾಡುವಾಗ ಸಿಂಹ ರಾಶಿಯ ಜನರು ಕಂದು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದರಿಂದ ನೀವು ಆರ್ಥಿಕ ಲಾಭವನ್ನ ಪಡೆಯಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯ ಜನರು ದೀಪಾವಳಿಯ ದಿನ ಪೂಜೆ ಮಾಡುವಾಗ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಬಿಳಿ ಬಣ್ಣದ ಬಟ್ಟೆಗಳನ್ನ ಧರಿಸುವುದರಿಂದ ಮನೆಯಲ್ಲಿನ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ