ರೇಣುಕಾಸ್ವಾಮಿ ಕೊಲೆ ಕೇಸ್ ನ ಎ2 ಆರೋಪಿ ದರ್ಶನ್ ಬೇಲ್ ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಬೇಲ್ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇಂದು ಹೈಕೋರ್ಟ್ ನಲ್ಲೂ ದರ್ಶನ್ ಗೆ ಜಾಮೀನು ಸಿಕ್ಕಿಲ್ಲ.
ಅಕ್ಟೋಬರ್ 22ರಂದು ಹೈಕೋರ್ಟ್ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಬಳಿಕ ಅಕ್ಟೋಬರ್ 28ಕ್ಕೆ ಬೇಲ್ ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು. ಅದರಂತೆ ಇಂದು ಬೇಲ್ ಅರ್ಜಿ ವಿಚಾರಣೆ ನಡೆಸಿದ್ದು, ನಾಳೆಗೆ ವಿಚಾರಣೆ ಮುಂದೂಡಲಾಗಿದೆ.
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹಿನ್ನಲೆ ದರ್ಶನ್ ಮೆಡಿಕಲ್ ರಿಪೋರ್ಟ್ ಅನ್ನು ಕೂಡ ಜೈಲು ಅಧಿಕಾರಿಗಳು ಕೊರ್ಟ್ಗೆ ಸಲ್ಲಿಸಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ವೈದ್ಯಕೀಯ ವರದಿ ತಂದ ಜೈಲಾಧಿಕಾರಿಗಳು ಜಾಮೀನು ಅರ್ಜಿ ವಿಚಾರಣೆ ವೇಳೆ ಕೋರ್ಟ್ ಗೆ ರಿಪೋರ್ಟ್ ಸಲ್ಲಿಸಲಿದ್ದಾರೆ. ನಾಳೆ ಅಕ್ಟೋಬರ್ 29ರಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ದರ್ಶನ್ಗೆ ಬೆನ್ನುನೋವು ನಿವಾರಣೆಗೆ ಶಸ್ತ್ರ ಚಿಕಿತ್ಸೆ ಅವಶ್ಯವಿದೆ ಅಂತ ಎಂಆರ್ಐ ಸ್ಕ್ಯಾನಿಂಗ್ನಲ್ಲಿ ವೈದ್ಯರು ಪ್ರಸ್ತಾಪಿಸಿದ್ದಾರೆ. ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿ ಬಳ್ಳಾರಿ ಬಿಮ್ಸ್ನಲ್ಲಿ ಅಗತ್ಯ ಸೌಲಭ್ಯ ಇದೆ ಅಂತ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಅಂತ ಹೇಳಲಾಗಿದೆ.
ಆದರೆ ದರ್ಶನ್ ಮಾತ್ರ ತಾವು ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಇದೆ.