ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದ ಹರ್ಷಿತ್ ರಾಣಾ ಇದೀಗ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
MLC Puttanna: ಸಿದ್ದರಾಮಯ್ಯ ಬಳಿಕ ಸಿಎಂ ಆಗುವ ಎಲ್ಲಾ ಅವಕಾಶ ಡಿಕೆಶಿಗೆ ಇದೆ: ಪುಟ್ಟಣ್ಣ
22 ವರ್ಷದ ಹರ್ಷಿತ್ ರಾಣಾ ಐಪಿಎಲ್ನಿಂದ ಗಮನ ಸೆಳೆದ ಸ್ಟಾರ್ ಬೌಲರ್. ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ಗಾಗಿ ಅದ್ಭುತ ಪ್ರದರ್ಶನ ನೀಡಿದ್ದ ಹರ್ಷಿತ್ ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದರು. ಆದರೆ ಅವರಿಗೆ ಚೊಚ್ಚಲ ಪಂದ್ಯವಾಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಆಯ್ಕೆಯಾಗಿದ್ದಾರೆ.
ಆಯ್ಕೆಯ ಬೆನ್ನಲ್ಲೇ ಹರ್ಷಿತ್ ರಾಣಾ ದೇಶೀಯ ಅಂಗಳದಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದ ಹರ್ಷಿತ್ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹರ್ಷಿತ್ ರಾಣಾಗೆ ಬಾಲ್ಯದಿಂದಲೂ ಬಾರ್ಡರ್-ಗವಾಸ್ಕರ್ ಟ್ರೋಫಿ ಎಂದರೆ ಪಂಚಪ್ರಾಣ. ಈ ಬಗ್ಗೆ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಹರ್ಷಿತ್, ನನಗೆ ಬಾಲ್ಯದಿಂದಲೇ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಎಂದರೆ ತುಂಬಾ ಇಷ್ಟ. ಹೀಗಾಗಿಯೇ ಈ ಟೂರ್ನಿ ಪಂದ್ಯಗಳನ್ನು ವೀಕ್ಷಿಸಲು ದೆಹಲಿಯ ಚಳಿಯನ್ನೇ ಲೆಕ್ಕಿಸದೇ ಬೆಳಿಗ್ಗೆ 4 ಗಂಟೆಗೆ ತಂದೆಯೊಂದಿಗೆ ಎದ್ದು ಕೂತಿರುತ್ತಿದ್ದೆ.
ಅಲ್ಲದೆ 6ನೇ ವಯಸ್ಸಿನಿಂದಲೂ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ನೋಡುತ್ತಿದ್ದೇನೆ. 2020-21ರ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ, ಚೇತೇಶ್ವರ ಪೂಜಾರ ಅವರ ದೇಹದ ಮೇಲೆ ಚೆಂಡುಗಳಿಂದಾದ ಗಾಯವಾಗಿರಲಿ ಅಥವಾ ಅಶ್ವಿನ್-ಹನುಮ ವಿಹಾರಿಯ ನಡುವಿನ ಪಾಲುದಾರಿಕೆಯಾಗಿರಲಿ, ಈ ಎಲ್ಲಾ ಕ್ಷಣಗಳು ದೇಶಕ್ಕಾಗಿ ನಾನು ಕೂಡ ಆಡಬೇಕೆಂದು ನನ್ನನ್ನು ಪ್ರೇರೇಪಿಸಿವೆ. ಇದೀಗ ಇದೇ ಸರಣಿಗಾಗಿ ನಾನು ಕೂಡ ಆಯ್ಕೆಯಾಗಿರುವುದು ಖುಷಿ ನೀಡಿದೆ ಎಂದು ಹರ್ಷಿತ್ ರಾಣ ಹೇಳಿದ್ದಾರೆ.
ಫಿಟ್ನೆಸ್ ಸಾಧಿಸಬೇಕೆಂದು ಪಣತೊಟ್ಟಿದ್ದ ಹರ್ಷಿತ್ ರಾಣಾ 2023-24 ರ ರಣಜಿ ಸೀಸನ್ ವೇಳೆ ಮಂಡಿರಜ್ಜು ಗಾಯಗೊಳ್ಳಕ್ಕಾದರು. ಇದರಿಂದ ಇಡೀ ರಣಜಿ ಸೀಸನ್ನಿಂದ ಹೊರಗುಳಿಯಬೇಕಾಯಿತು. ಆದರೆ ಆ ಬಳಿಕ ದೇಹ ದಂಡನೆ ಮುಂದುವರೆಸಿದರು. ಪರಿಣಾಮ ಹರ್ಷಿತ್ ರಾಣ ಒಂದೇ ವರ್ಷದೊಳಗೆ 17 ಕೆ.ಜಿ ತೂಕ ಕಳೆದುಕೊಂಡರು.