ಆಸ್ಟ್ರೇಲಿಯಾ ಸರಣಿಗೆ ಶಮಿ ಎಂಟ್ರಿ ಆಗಲಿದ್ದಾರೆ ಎಂಬ ವರದಿ ಆಗಿದೆ. ಆದರೆ ಇದಕ್ಕೂ ಮುನ್ನ ದೇಶೀಯ ಕ್ರಿಕೆಟ್ ನಲ್ಲಿ ಅವರು ತಮ್ಮ ಬೌಲಿಂಗ್ ಸಾಮರ್ಥ್ಯ ನಿರೂಪಿಸಬೇಕಾಗಿದೆ. ಹೀಗಾದ್ರೆ ಆಸ್ಟ್ರೇಲಿಯಾ ಸರಣಿ ಸೇರೋದು ಫಿಕ್ಸ್ ಎನ್ನಲಾಗಿದೆ.
Sabarimala temple: ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್: ವಿಮಾನಗಳಲ್ಲಿ ಇರುಮುಡಿ ಸಾಗಿಸಲು ಸರ್ಕಾರ ಅಸ್ತು.!
ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 18 ಸದಸ್ಯರ ಈ ತಂಡದಲ್ಲಿ ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ ಕಾಣಿಸಿಕೊಂಡಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಅವರ ಫಿಟ್ನೆಸ್ ಸಮಸ್ಯೆ. ಪಾದದ ನೋವಿನಿಂದ ಚೇತರಿಸಿಕೊಂಡಿರುವ ಶಮಿ ಇದೀಗ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಕಸರತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ.
ಮೊಹಮ್ಮದ್ ಶಮಿ ದೇಶೀಯ ಅಂಗಳದಲ್ಲಿ ಒಂದೆರಡು ಪಂದ್ಯಗಳನ್ನಾಡಿ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇದೀಗ ಬೌಲಿಂಗ್ ಅಭ್ಯಾಸ ಶುರು ಮಾಡಿರುವ ಮೊಹಮ್ಮದ್ ಶಮಿ ನವೆಂಬರ್ 6 ರಿಂದ ರಣಜಿ ಕ್ರಿಕೆಟ್ಗೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಈ ವರದಿಯಂತೆ ಶಮಿ ಡಿಸೆಂಬರ್ ಒಳಗೆ ಎರಡು ಮೂರು ರಣಜಿ ಪಂದ್ಯಗಳನ್ನಾಡಿದರೆ ಅವರನ್ನು ಆಸ್ಟ್ರೇಲಿಯಾ ಸರಣಿಗೆ ಪರಿಗಣಿಸಲಿದ್ದಾರೆ. ಅದರಂತೆ ಮೊಹಮ್ಮದ್ ಶಮಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯದ ವೇಳೆ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.
ಅಂದರೆ ಬ್ರಿಸ್ಬೇನ್ನಲ್ಲಿ ಡಿಸೆಂಬರ್ 14 ರಿಂದ ಶುರುವಾಗಲಿರುವ ಗಬ್ಬಾ ಟೆಸ್ಟ್ಗೂ ಮುನ್ನ ಶಮಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಡುವೆಯೇ ಮೊಹಮ್ಮದ್ ಶಮಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟರೂ ಅಚ್ಚರಿಪಡಬೇಕಿಲ್ಲ.