ನಾಗರಿಕ ವಿಮಾನಯಾನ ಸಚಿವಾಲಯವು ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಐಫೋನ್ 16 ತಕ್ಷಣವೇ ನಿಲ್ಲಿಸಿ: ಆ್ಯಪಲ್ ಸಂಸ್ಥೆಗೆ ಬಿಗ್ ಶಾಕ್ ಕೊಟ್ಟ ಇಂಡೋನೇಷ್ಯಾ!
ಎಲ್ಲ ಹುದ್ದೆಗಳು ಕಾಂಟ್ರಾಕ್ಟ್ ಬೇಸ್ ಆಗಿದ್ದು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಡಿಜಿಸಿಎ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಆನ್ಲೈನ್ ಮೂಲಕ ಅಪ್ಲೇ ಮಾಡಿದ ಮೇಲೆ ಅದರ ಒಂದು ಪ್ರತಿಯನ್ನು ಅಭ್ಯರ್ಥಿಗಳು ದೆಹಲಿಗೆ ಕಳುಹಿಸಿಕೊಡಬೇಕು. ತಿಂಗಳ ಸಂಬಳ ಲಕ್ಷ.. ಲಕ್ಷ ರೂಪಾಯಿಗಳಲ್ಲಿ ಇದೆ. ಸಂದರ್ಶನವು ನಾಗರಿಕ ವಿಮಾನಯಾನ ಸಚಿವಾಲಯದ ನೇಮಕಾತಿ 2024ರ ಆಯ್ಕೆ ಪ್ರಕ್ರಿಯೆಯ ಭಾಗವಾಗಿರುತ್ತದೆ.
ಹುದ್ದೆಗಳ ಹೆಸರು, ಎಷ್ಟು ಉದ್ಯೋಗಗಳು?
ಕನ್ಸಲ್ಟೆಂಟ್ (Consultant) ( ವಿಮಾನಯಾನ ಕಾರ್ಯಾಚರಣೆಯ ಹಿರಿಯ ಇನ್ಸ್ಪೆಕ್ಟರ್ (ವಿಮಾನ))= 2 ಹುದ್ದೆಗಳು
ಕನ್ಸಲ್ಟೆಂಟ್ (ಫ್ಲೈಟ್ ಆಪರೇಶನ್ ಇನ್ಸ್ಪೆಕ್ಟರ್ (ವಿಮಾನ))= 10
ಕನ್ಸಲ್ಟೆಂಟ್ (ವಿಮಾನಯಾನ ಕಾರ್ಯಾಚರಣೆಯ ಹಿರಿಯ ಇನ್ಸ್ಪೆಕ್ಟರ್ (ಹೆಲಿಕಾಪ್ಟರ್)= 01
ಕನ್ಸಲ್ಟೆಂಟ್ (ವಿಮಾನಯಾನ ಕಾರ್ಯಾಚರಣೆಯ ಇನ್ಸ್ಪೆಕ್ಟರ್ (ಹೆಲಿಕಾಪ್ಟರ್)= 05
ಒಟ್ಟು ಹುದ್ದೆಗಳು– 18
ವಯಸ್ಸಿನ ಮಿತಿ- 65 ವರ್ಷದ ಒಳಗಿನವರಿಗೆ ಅವಕಾಶ
ವಿದ್ಯಾರ್ಹತೆ- 10ನೇ ತರಗತಿ ಅಂಕಪಟ್ಟಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಅಭ್ಯಾಸ ಮಾಡಿರಬೇಕು. ಇದರ ಜೊತೆಗೆ ಸಂಸ್ಥೆ ಕೇಳಿದ ಲೈಸೆನ್ಸ್ ಸೇರಿ ಇತರೆ ನಿಖರ ದಾಖಲಾತಿಗಳು ಅಭ್ಯರ್ಥಿಗಳ ಅರ್ಜಿ ಜೊತೆ ಸಲ್ಲಿಕೆ ಮಾಡಬೇಕು. ಇದಕ್ಕಾಗಿ ಇಲಾಖೆಯ ವೆಬ್ಸೈಟ್ ಅನ್ನು ವೀಕ್ಷಿಸಬೇಕು.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಹೆಸರು ಶಾರ್ಟ್ ಲಿಸ್ಟ್
ಸಂದರ್ಶನ
ದಾಖಲಾತಿ ಪರಿಶೀಲನೆ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 28 ಅಕ್ಟೋಬರ್ 2024
ಹಾರ್ಡ್ಕಾಪಿ ಕಳುಹಿಸುವ ದಿನಾಂಕ- 04 ನವೆಂಬರ್ 2024
ಅರ್ಜಿ ಸಲ್ಲಿಸಿದ ಮೇಲೆ ಹಾರ್ಡ್ ಕಾಪಿಯಲ್ಲಿ ಸೆಲ್ಫ್ ಅಟೆಸ್ಟೆಡ್ ಮಾಡಿ ದೆಹಲಿಗೆ ಕಳುಹಿಸಬೇಕು