ಐಫೋನ್ 16 ತಕ್ಷಣವೇ ನಿಲ್ಲಿಸಿ ಎಂದು ಹೇಳುವ ಮೂಲಕ ಆ್ಯಪಲ್ ಸಂಸ್ಥೆಗೆ ಇಂಡೋನೇಷ್ಯಾ ಬಿಗ್ ಶಾಕ್ ಕೊಟ್ಟಿದೆ. ಅಲ್ಲದೇ ಆ್ಯಪಲ್ ಸಂಸ್ಥೆ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ.
DCM ಡಿಕೆಶಿ ಸಿಎಂ ಆಗಲು ಚನ್ನಪಟ್ಟಣವೇ ಅಸ್ತ್ರ: ಕುತೂಹಲ ಕೆರಳಿಸಿದ “ಕೈ” ಮುಖಂಡನ ಹೇಳಿಕೆ!
ಎಸ್, ಐಫೋನ್ 16 ಮಾರಾಟ ತಕ್ಷಣವೇ ನಿಲ್ಲಿಸಲು ಇಂಡೋನೇಷ್ಯಾ ಆದೇಶ ಹೊರಡಿಸಿದೆ. ಅಲ್ಲಿನ ಸರ್ಕಾರವು ಆ್ಯಪಲ್ ವಿರುದ್ಧದ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆ್ಯಪಲ್ ಸಂಸ್ಥೆಯು ನಮ್ಮ ದೇಶದಲ್ಲಿ ಹೂಡಿಕೆ ಮಾಡೋದಾಗಿ ಹೇಳಿತ್ತು. ಆದರೆ ಅದು ನುಡಿದಂತೆ ನಡೆದುಕೊಂಡಿಲ್ಲ ಎಂದು ಇಂಡೋನೇಷ್ಯಾ ಆರೋಪಿಸಿದೆ.
ಆ್ಯಪಲ್ ಸಂಸ್ಥೆಯು ಇಂಡೋನೇಷ್ಯಾದಲ್ಲಿ ಸ್ವಲ್ಪ ಹೂಡಿಕೆ ಮಾಡಿದೆ. ಆದರೆ ಕಂಪನಿಯು ಬಯಸಿದಷ್ಟು ಅಲ್ಲ. ಈಗ ಸರ್ಕಾರದಿಂದ ಟಿಕೆಡಿಎನ್ ಸರ್ಟಿಫಿಕೇಟ್ ಪ್ರಮಾಣೀಕರಣ ನೀಡಿಲ್ಲ. ಒಪ್ಪಂದ ಪ್ರಕಾರ, ಆ್ಯಪಲ್ ನಡೆದುಕೊಳ್ಳದ ಹಿನ್ನೆಲೆಯಲ್ಲಿ iPhone-16 ಮಾರಾಟವಾಗಲ್ಲ ಎಂದು ಸರ್ಕಾರ ಹೇಳಿದೆ. ಇನ್ನು ಇಂಡೋನೇಷ್ಯಾ ಸರ್ಕಾರ ಉಳಿದ ಹೂಡಿಕೆಗಾಗಿ ಕಾಯುತ್ತಿದೆ.
ಟಿಮ್ ಕುಕ್ ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಮಾತನಾಡುವಾಗ ಸಭೆ ಸಕರಾತ್ಮಕವಾಗಿತ್ತು. ಅಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಬಗ್ಗೆ ಕುಕ್ ಮಾತನಾಡಿದ್ದರು. ಸರ್ಕಾರದ ಈ ನಿರ್ಧಾರ ಕಂಪನಿಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.