ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಸ್ನೇಹಾ ಪಾತ್ರ ಅಂತ್ಯವಾಗಿದೆ. ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ ಸೀರಿಯಲ್ಗೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ.
ಅಯ್ಯೋ ದರ್ಶನ್ ಗೆ ಈ ರೀತಿ ಆಗ್ಬಾರ್ದಿತ್ತು: ಪ್ರಾಣ ಹಿಂಡುವಷ್ಟು ಬೆನ್ನು ನೋವು, ಹೀಗಾದ್ರೆ ಮುಂದಿನ ಕೆರಿಯರ್ ಗತಿ!?
ಇನ್ನೂ ಪುಟ್ಟಕ್ಕನ ಧಾರಾವಾಹಿಯಿಂದ ಹೊರನಡೆದಿ ಬಳಿಕ ಸ್ನೇಹ ಪಾತ್ರಧಾರಿ ಸಂಜನಾ ತಮ್ಮ ಈ ನಿರ್ಣಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನನ್ನ ಜೀವನದ ಭಾಗವಾಗಿತ್ತು. ಆದರೆ ಎಲ್ಲ ಒಳ್ಳೆಯ ವಿಷಯಗಳಿಗೂ ಕೊನೆ ಎಂಬುದು ಇರುತ್ತದೆ, ಹಾಗೆಯೇ ನನ್ನ ಈ ಜರ್ನಿಯೂ ಕೊನೆ ಆಗಿದೆ. ಸ್ನೇಹಾ ಪಾತ್ರವನ್ನು ನಿರ್ವಹಿಸುವುದು ಕಳೆದ ಮೂರು ವರ್ಷಗಳಿಂದಲೂ ನನ್ನ ವೃತ್ತಿ ಜೀವನದ ಭಾಗವಾಗಿತ್ತು. ಸ್ನೇಹಾ ಪಾತ್ರದಲ್ಲಿ ನಟಿಸಿದ್ದಕ್ಕೆ ನನಗೆ ಬಹಳ ಹೆಮ್ಮೆ ಇದೆ. ಆ ಪಾತ್ರ ನನಗೆ ನೀಡಿದ್ದಕ್ಕೆ ನಾನು ಇಡೀ ವಿಶ್ವ, ಧಾರಾವಾಹಿ ತಂಡ ಹಾಗೂ ಜೀ ಕನ್ನಡ ಚಾನೆಲ್ಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ ಸ್ನೇಹಾ.
ಮಹತ್ವಾಕಾಂಕ್ಷಿ, ಆತ್ಮವಿಶ್ವಾಸಿ ಮತ್ತು ಬೆಂಕಿಯಂಥಹಾ ವ್ಯಕ್ತಿತ್ವದ ಸ್ನೇಹಾ ಪಾತ್ರಕ್ಕೆ ನಾನು ವಿದಾಯ ಹೇಳಲೇ ಬೇಕಿದೆ. ಸ್ನೇಹಾ ಪಾತ್ರದಿಂದ ಹೊರಗೆ ಬರಬೇಕಾದ ಸಮಯ ಬಂದಾಗಿದೆ. ಭಾರವಾದ ಹೃದಯದಿಂದ ನಾನು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ವಿದಾಯ ಹೇಳುತ್ತಿದ್ದೇನೆ. ನಿರ್ಲಕ್ಷ್ಯ ಮಾಡಲಾಗದ ಕೆಲವು ವೈಯಕ್ತಿಕ ಕಾರಣಿಗಳಿಗಾಗಿ ಹಾಗೂ ಬಂದು ನಿಂತಿರುವ ಕೆಲವು ಸವಾಲುಗಳನ್ನು ಎದುರಿಸಲು ನಾನು ಈ ಧಾರಾವಾಹಿಂದ ಹೊರಗೆ ಬರಲೇ ಬೇಕಾಗಿದೆ’ ಎಂದಿದ್ದಾರೆ.
ಧಾರಾವಾಹಿಯ ಕತೆಯಲ್ಲಿ ನನ್ನ ಪಾತ್ರ ಸಾಯುವುದನ್ನು ನೋಡಿ ಹಲವರು ಬೇಸರ ವ್ಯಕ್ತಪಡಿಸಿದ್ದೀರಿ. ದುಃಖಿತರಾಗಿದ್ದೀರಿ, ನಾನು ಪಾತ್ರಕ್ಕೆ ಹಾಕಿದ ಶ್ರಮಕ್ಕೆ ಪರ್ಯಾಯ ಇಲ್ಲವೆಂಬುದಕ್ಕೆ ಅದು ಸಾಕ್ಷಿ. ಆದರೆ ಇದನ್ನು ಧನಾತ್ಮಕವಾಗಿ ತೆಗೆದುಕೊಳ್ಳೋಣ. ಮುಂದಿನ ದಿನಗಳಲ್ಲಿ ಅಭಿಮಾನಿಗಳನ್ನು ಭಿನ್ನ ಪಾತ್ರದ ಮೂಲಕ ಭೇಟಿ ಆಗುವ ವಿಶ್ವಾಸ ನನಗೆ ಇದೆ. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಜನ ನನಗೆ ನೀಡಿರುವ ಪ್ರೀತಿ, ಪ್ರೋತ್ಸಾಹಕ್ಕೆ ನಾನು ಚಿರಋಣಿ, ನನ್ನ ಮುಂದಿನ ಪ್ರಯತ್ನಗಳಿಗೂ ಇದೇ ರೀತಿಯ ಪ್ರೀತಿ, ಗೌರವ ಸಿಗುತ್ತದೆ ಎಂಬ ವಿಶ್ವಾಸ ನನಗೆ ಇದೆ’ ಎಂದು ಸಂಜನಾ ಹೇಳಿದ್ದಾರೆ.