ಧೋನಿ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಹೌದು ಲೆಜೆಂಡ್ ಕ್ರಿಕೆಟಿಗ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೀವಾಳ ಎಂ.ಎಸ್ ಧೋನಿ 2025ರ ಐಪಿಎಲ್ ಆವೃತ್ತಿಯಲ್ಲೂ ಕಣಕ್ಕಿಳಿಯೋದು ಫಿಕ್ಸ್ ಆಗಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಾಲೀಕರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ.
Passion Fruit Benefits: ಪ್ಯಾಶನ್ ಫ್ರೂಟ್ ಹಣ್ಣಿನ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?
2025ರ ಐಪಿಎಲ್ನಲ್ಲೂ ಮಹಿ ಆಡುತ್ತಾರೆ ಎಂದು ಫ್ರಾಂಚೈಸಿ ಮಾಲೀಕ ಎನ್. ಶ್ರೀನಿವಾಸನ್ ತಿಳಿಸಿರುವುದಾಗಿ ವರದಿಯಾಗಿದೆ. ಆದ್ರೆ ಮಹಿ ತಂಡದಲ್ಲಿ ಮೊದಲ ರಿಟೇನ್ ಆಟಗಾರನಾಗಿ ಉಳಿಯುತ್ತಾರಾ? ಅಥವಾ ಅನ್ಕ್ಯಾಪ್ಡ್ ಪ್ಲೇಯರ್ (ಹೊಸಬರು) ಆಗಿ ತಂಡದಲ್ಲಿರುತ್ತಾರಾ? ಎಂಬುದು ಪಟ್ಟಿ ಬಿಡುಗಡೆ ಮಾಡಿದ ಬಳಿಕ ತಿಳಿಯಲಿದೆ.
ಅ.31ಕ್ಕೆ ಆಟಗಾರರ ಭವಿಷ್ಯ:
2025 ಐಪಿಎಲ್ ಮೆಗಾ ಹರಾಜು ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್ 31ರಂದು ಸಂಜೆ 4:30ರ ವೇಳೆಗೆ ಎಲ್ಲಾ ಫ್ರಾಂಚೈಸಿಗಳು ತಂಡದ ರಿಟೇನ್ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಲಿವೆ. ಜಿಯೋ ಸಿನಿಮಾದಲ್ಲಿ (Jio Cinema) ಇದರ ನೇರ ಪ್ರಸಾರ ನಡೆಯಲಿದೆ.
ಮಹಿ ನಂ.1 ರಿಟೇನ್ ಆಟಗಾರ?
ಮೂಲಗಳ ಪ್ರಕಾರ, ಮಹಿ ಮುಂದಿನ ಆವೃತ್ತಿಯಲ್ಲಿ ಚೆನ್ನೈ ತಂಡದಲ್ಲಿ ಆಡಲಿದ್ದು, ಫ್ರಾಂಚೈಸಿ ಅವರನ್ನು ನಂ.1 ರಿಟೇನರ್ ಮಾಡಿಕೊಂಡಿದೆ. ಇನ್ನುಳಿದಂತೆ ನಾಯಕ ಋತುರಾಜ್ ಗಾಯಕ್ವಾಡ್ ನಂ.2, ಆಲ್ರೌಂಡರ್ ರವೀಂದ್ರ ಜಡೇಜಾ ನಂ.3 ಆಟಗಾರನಾಗಿ ತಂಡದಲ್ಲಿ ಉಳಿಯಲಿದ್ದಾರೆ. ಇದರೊಂದಿಗೆ ಶಿವಂ ದುಬೆ, ಡೆವೊನ್ ಕಾನ್ವೆ, ಮತೀಶ ಪತಿರಣ ಮತ್ತು ರಮೀಜ್ ರಿಜ್ವಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದ್ರೆ ಕೆಲವು ವರದಿಗಳು ಧೋನಿ ಅನ್ಕ್ಯಾಪ್ಡ್ ಪ್ಲೇಯರ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಅ.31ರಂದು ಫ್ರಾಂಚೈಸಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಬಿಡುಗಡೆಗೊಳಿಸಿದ ಬಳಿಕ ಯಾರ ಭವಿಷ್ಯ ಹೇಗೆ? ಎಂಬುದು ಗೊತ್ತಾಗಲಿದೆ.
ರಿಟೇನ್ ಆಟಗಾರರಿಗೆ ಮೊತ್ತ ಎಷ್ಟು?
ಈ ಬಾರಿ ಐಪಿಎಲ್ನಲ್ಲಿ ಮಹತ್ವದ ಬದಲಾವಣೆ ತಂದಿರುವ ಬಿಸಿಸಿಐ 5 ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಹಾಗೂ 1 ಆರ್ಟಿಎಂ ಕಾರ್ಡ್ (RTM Card) ಬಳಕೆಗೆ ಅನುಮತಿ ನೀಡಿದೆ. ಈ ಪೈಕಿ ಇಬ್ಬರು ಆಟಗಾರರ (ಮೊದಲು ಮತ್ತು 4ನೇ ರಿಟೇನ್ ಆಟಗಾರ) ತಲಾ 18 ಕೋಟಿ ರೂ. ಪಡೆಯಲಿದ್ದಾರೆ. 2 ಮತ್ತು 5ನೇ ಆಟಗಾರ ತಲಾ 14 ಕೋಟಿ ರೂ. ಹಾಗೂ 3ನೇ ರಿಟೇನ್ ಆಟಗಾರ 11 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಆದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ 5 ವರ್ಷ ಪೂರೈಸಿದ ಆಟಗಾರರನ್ನು ಅನ್ಕ್ಯಾಪ್ಡ್ ಪ್ಲೇಯರ್ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅವರು ನಿಯಮದಂತೆ 4 ಕೋಟಿ ರೂ. ಮಾತ್ರವೇ ಸಂಭಾವನೆ ಪಡೆಯಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.