ಗದಗ:- ಬಸ್ ನಲ್ಲೇ ಚಿನ್ನಾಭರಣ ಇದ್ದ ಬ್ಯಾಗ್ ಹಿಂತಿರುಗಿಸಿ ನಿರ್ವಾಹಕಿ ಒಬ್ಬರು ಮಾನವೀಯತೆ ಮೆರದಿದ್ದಾರೆ.
ಮೂವತ್ತು ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣ ಮತ್ತು 2160 ರೂ. ಇದ್ದ ಬ್ಯಾಗ್ ಇದಾಗಿದ್ದು, ಗದಗ ತಾಲೂಕಿನ ಮುಳಗುಂದ ಪಟ್ಟಣದ ಶಕಿಲಾಬಾನು ಎಂಬ ಮಹಿಳೆ ಬ್ಯಾಗ್ ಮರೆತು ಹೋಗಿದ್ದರು. ಬಸ್ ನಲ್ಲೇ ಬ್ಯಾಗ್ ಮರೆತು ಗದಗ ಬಸ್ ನಿಲ್ದಾಣದಲ್ಲಿ ಮಹಿಳೆ ಇಳಿದಿದ್ದರು.
ಈ ವೇಳೆ ಬಸ್ ನಲ್ಲಿ ಬ್ಯಾಗ್ ಗಮನಿಸಿ ತಮ್ಮ ಅಧಿಕಾರಿಗಳ ಗಮನಕ್ಕೆ ನಿರ್ವಾಹಕಿ ಅನಸೂಯಾ ತಂದಿದ್ದಾರೆ. ಬಳಿಕ ಬ್ಯಾಗ್ ನಲ್ಲಿದ್ದ ಪ್ಯಾನ್ ಕಾರ್ಡ್ ಮೂಲಕ ಮಹಿಳೆ ಕರೆಸಿದ್ದಾರೆ. ನಿರ್ವಾಹಕಿ ಪೊಲೀಸರ ಸಮ್ಮುಖದಲ್ಲಿ ಆಭರಣ ಹಾಗೂ ಹಣ ಮರಳಿಸಿದ್ದಾರೆ.
ನಿರ್ವಾಹಕಿಯ ಪ್ರಾಮಾಣಿಕ ಕರ್ತವ್ಯಕ್ಕೆ ಸಾರ್ವಜನರಿಂದ ಶ್ಲಾಘಣೆ ವ್ಯಕ್ತವಾಗಿದೆ.