ಹಸಿ ಮೆಣಸಿನಕಾಯಿ ಗಾಢ ಹಸಿರು ಬಣ್ಣ ಹಾಗೂ ರುಚಿಯಲ್ಲಿ ಖಾರದಿಂದ ಕೂಡಿರುತ್ತದೆ. ಆಹಾರ ಪದಾರ್ಥಗಳ ರುಚಿಯು ಖಾರದಿಂದ ಕೂಡಿರುತ್ತದೆ. ಖಾರದ ರುಚಿಗಾಗಿ ಬಳಸುವುದನ್ನು ಬಿಟ್ಟರೆ ಯಾವುದೇ ಪ್ರಮುಖ ಖಾದ್ಯವನ್ನಾಗಿ ತಯಾರಿಸುವುದಿಲ್ಲ. ರುಚಿಯಲ್ಲಿ ಖಾರವಾಗಿದ್ದರೂ ಸಮೃದ್ಧವಾದ ಜೀವಸತ್ವಗಳನ್ನು ಹಾಗೂ ಪೋಷಕಾಂಶಗಳನ್ನು ಒಳಗೊಂಡಿದೆ.
ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿ ದರ್ಶನ ಪಡೆದ DCM ಡಿಕೆ ಶಿವಕುಮಾರ್!
ಹಸಿ ಮೆಣಸಿನಕಾಯಿ ಜೀರ್ಣಕ್ರಿಯೆಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹೆಚ್ಚಿನ ಜನರು ಮಳೆಗಾಲದಲ್ಲಿ ಅಸಿಡಿಟಿ ಮತ್ತು ಮಲಬದ್ಧತೆಯಂತಹ ಹಲವಾರು ಸಮಸ್ಯೆಗಳಿಂದ ಬಳಲುತ್ತಾರೆ. ಅಂತವರು ಹಸಿ ಮೆಣಸಿನಕಾಯಿ ತೆಗೆದುಕೊಳ್ಳಬಹುದು. ಹಸಿ ಮೆಣಸಿನಕಾಯಿಯಲ್ಲಿರುವ ಆಂಟಿಆಕ್ಸಿಡೆಂಟ್ ಮತ್ತು ಫೈಬರ್ ಜೀರ್ಣಕ್ರಿಯೆಯ ತೊಂದರೆಗಳಿಂದ ರಕ್ಷಿಸುತ್ತದೆ.
ಹಸಿ ಮೆಣಸಿನಕಾಯಿಯಲ್ಲಿರುವ ವಿಟಮಿನ್ ಎ ದೃಷ್ಟಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಕಬ್ಬಿಣದಲ್ಲಿ ಸಮೃದ್ಧವಾಗಿರುವ ಹಸಿ ಮೆಣಸಿನಕಾಯಿಯು ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಬೇಸಿಗೆಯಲ್ಲಿ ಅನೇಕ ಜನರು ಶಾಖದ ಹೊಡೆತದಿಂದ ಬಳಲುತ್ತಿದ್ದಾರೆ. ಹೀಗಾಗಿ, ಹಸಿರು ಮೆಣಸಿನಕಾಯಿಯನ್ನು ಸೇವಿಸುವುದರಿಂದ ಹೀಟ್ ಸ್ಟ್ರೋಕ್ ಸಮಸ್ಯೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಹಸಿಮೆಣಸಿನಕಾಯಿಯನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಲು ಬಯಸುವವರು ದಿನಕ್ಕೆ 3 ರಿಂದ 4 ಹಸಿರು ಮೆಣಸಿನಕಾಯಿಯನ್ನು ಸೇವಿಸಿದರೆ ಸಾಕು. ಹೆಚ್ಚಾಗಿ ತಿಂದರೆ ಹೊಟ್ಟೆ ಉರಿಯುವಂತಹ ಸಮಸ್ಯೆಗಳು ಬರುತ್ತವೆ. ಪೈಲ್ಸ್ನಿಂದ ಬಳಲುತ್ತಿರುವ ವ್ಯಕ್ತಿಯು ಹಸಿ ಮೆಣಸಿನಕಾಯಿಯಂತಹ ಮಸಾಲೆಯುಕ್ತ ಆಹಾರವನ್ನು ತ್ಯಜಿಸಬೇಕು.