ಕಲಘಟಗಿ: ತಾಲೂಕಿನ ತಡಸ ಮಾರ್ಗದ ಬೀರವಳ್ಳಿ ಹತ್ತಿರ ರೈತನ ಜಮೀನಿನ ಮನೆಯಲ್ಲಿ ಸಾಕು ನಾಯಿಯನ್ನು ನಿನ್ನೆ ರಾತ್ರಿ ತಿಂದು ಹಾಕಿದ ಚಿರತೆ ಗ್ರಾಮಸ್ಥರಲ್ಲಿ ಭಯದ ಭೀತಿಯನ್ನುಂಟು ಮಾಡಿದೆ.
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಅನಿವಾರ್ಯ ಆಗಿತ್ತು: HD ರೇವಣ್ಣ!
ಮಲ್ಲೇಶಪ್ಪ ಇಂಗಳಗಿ ಎಂಬುವರ ಜಮೀನಾಗಿದ್ದು, ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡುವುದಾಗಿ ಗ್ರಾಮದ ರೈತ ಭೀಮಪ್ಪ ಕೋಲ್ಕಾರ್ ಅವರು ಆತಂಕದಿಂದ ಹೇಳಿಕೊಂಡರು,
ಇತ್ತೀಚಿಗಷ್ಟೆ ತಾಲೂಕಿನ ತಬಕದ ಹೊನ್ನಳ್ಳಿ ಗ್ರಾಮದ ಬಳಿಯ ರೈತರೊಬ್ಬರ ಜಮೀನಿನ ಮನೆಯಲ್ಲಿದ್ದ ನಾಯಿಯನ್ನು ತಿಂದು ಹಾಕಿದ್ದ ಚಿರತೆಯನ್ನು ಹಲವು ದಿನಗಳ ವರೆಗೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬೋನಿಗೆ ಸಿಕ್ಕು ಹಾಕಿಸಿ ಮರಳಿ ಅರಣ್ಯಕ್ಕೆ ಕಳುಹಿಸಿದ್ದರು,
ಈಗ ನಾಯಿಯನ್ನು ತಿಂದು ಹಾಕಿದ್ದು, ಬಿರುವಳ್ಳಿ, ಬೆಂಡಲಗಟ್ಟಿ, ಆಸ್ತಕ ಕಟ್ಟಿ ಗ್ರಾಮಗಳ ಸುತ್ತಲಿನ ಜನರಿಗೆ ಭೀತಿಯನ್ನು ಉಂಟು ಮಾಡಿದೆ.
ಈ ಕುರಿತು ತಾಲೂಕ ವಲಯ ಅರಣ್ಯ ಅಧಿಕಾರಿ ಅರುಣ್ ಅಷ್ಟಗಿ ಅವರು ಪತ್ರಿಕೆಯೊಂದಿಗೆ ಮಾತನಾಡಿ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಕಳುಹಿಸಿದ್ದು ಮುಂಜಾಗೃತ ಕ್ರಮವನ್ನು ಕೈಗೊಳ್ಳುತ್ತಿರುವುದಾಗಿ ಹೇಳಿದರು.
ವರದಿ: ಮಾರುತಿ ಲಮಾಣಿ,