ಚಿಕ್ಕಬಳ್ಳಾಪುರ :- ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಾಂತಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಸಾಲ ಸೋಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಬೆಳೆದ ಸೌತೆಕಾಯಿ ಆರು ಕಾಸು ಮೂರು ಕಾಸಿಗೆ ಬಿಕರಿಯಾಗುತ್ತಿದ್ದು, ರೈತರು ಕಣ್ಣೀರುಡುವಂತಾಗಿದೆ.
ಸ್ನೇಹಿತರೊಂದಿಗೆ ಖುಷಿಯಲ್ಲಿದ್ದ ವ್ಯಕ್ತಿಗೆ ಹೃದಯಾಘಾತ: ಸ್ಥಳದಲ್ಲೇ ಸಾವು!
ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹನಿ ಹನಿ ನೀರುಣಿಸಿ ಬಂಗಾರದಂಹತ ಬೆಳೆ ತೆಗೀತಾರೆ. ಹೂವು ಹಣ್ಣು ತರಕಾರಿ ಎಲ್ಲವನ್ನೂ ಬೆಳೆಯುವ ರೈತರು ಈ ಬಾರಿ ಯಥೇಚ್ಛವಾಗಿ ಸೌತೆಕಾಯಿಯನ್ನ ಬೆಳೆದಿದ್ದಾರೆ. ನಿರಂತರ ಮಳೆಯಿಂದ ಸೌತೆಕಾಯಿ ಇಳುವರಿಯೂ ಹೆಚ್ಚಾಗಿದ್ದು ಚಿಕ್ಕಬಳ್ಳಾಪುರ ತರಕಾರಿ ಮಾರುಕಟ್ಟೆಗೆ ಹೆಚ್ಚಿನ ಸೌತೆಕಾಯಿ ಬಂದಿದೆ.
ಇದ್ರಿಂದ ಒಂದು ಮೂಟೆ ಸೌತೆಕಾಯಿ ಕೇವಲ 100 ರಿಂದ 150 ರೂ.ಗೆ ಬಿಕರಿಯಾಗುತ್ತಿದ್ದು ಸೌತೆಕಾಯಿ ಬೆಳೆದ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ಇನ್ನೂ ಅತಿಯಾದ ಮಳೆಯ ಕಾರಣ ಒಂದು ಕಡೆ ಸೌತೆಕಾಯಿ ಬಂಪರ್ ಇಳುವರಿಯೂ ಬಂದಿದೆ. ಮತ್ತೊಂದು ಕಡೆ ಮಳೆ ಹೊಡೆತಕ್ಕೆ ಹೊಸ ಹೂವಿನ ಮೊಗ್ಗು ಎಲ್ಲವೂ ಉದುರಿ ಮುಂದೆ ಫಸಲು ಕುಂಠಿತವಾಗುತ್ತಿದೆ.