ಶ್ರೀನಿವಾಸಪುರ:- ಹುಚ್ಚು ನಾಯಿ ದಾಳಿ ಮಾಡಿ ಹತ್ತಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಣೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆದಿದೆ.
ಅ.27ರಂದು ಕಾಲಚಕ್ರ’ ನಾಟಕ ಪ್ರದರ್ಶನ: ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ!
ಒಂದೆ ಹುಚ್ಚು ನಾಯಿ ಹಲವು ಗ್ರಾಮಗಳಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಮಕ್ಕಳು, ಮಹಿಳೆಯರು, ಹಾಗೂ ವೃದ್ದರ ಮೇಲೆ ನಾಯಿ ದಾಳಿ ಮಾಡಿದೆ.
ಚಿಕ್ಕತಿಮ್ಮನಹಳ್ಳಿ, ರೆಡ್ಡಂಪಲ್ಲಿ, ಕೋಟಪಲ್ಲಿ, ರೋಜೇರಪಲ್ಲಿ, ಸುತ್ತಮುತ್ತ ಗ್ರಾಮಗಳಲ್ಲಿ ಹುಚ್ಚು ನಾಯಿ ದಾಳಿ ಮಾಡಿರುವುದಾಗಿ ತಿಳಿದು ಬಂದಿದೆ.
ಚಿಕ್ಕತಿಮ್ಮನಹಳ್ಳಿಯಲ್ಲಿ ದಮ್ಮರೆಡ್ಡಿ, ರೋಜರಪಲ್ಲಿಯಲ್ಲಿ ತಿಪ್ಪಮ್ಮ, ರೆಡ್ಡಂಪಲ್ಲಿಯಲ್ಲಿ ಗೀತಮ್ಮ ಕೋಟಪಲ್ಲಿಯಲ್ಲಿ ಮುನಿಯಪ್ಪಗೆ ಗಾಯವಾಗಿದೆ. ನಾಯಿ ಕಡಿತದಿಂದ ಕೆಲವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರು ಜನ ಗಾಯಾಳುಗಳಿಗೆ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.