ಬಾಗಲಕೋಟೆ:- ನಗರದ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಸರ್ಕಾರ ಮತ್ತು ಸಹಕಾರದೊಂದಿಗೆ ನವೆಂಬರ ಒಂದರಂದು ಬೆಳಿಗ್ಗೆ 9:00 ಬನಹಟ್ಟಿಯ ಎಸ್ ಆರ್ ಎ ಆಟದ ಮೈದಾನದಲ್ಲಿ ತಾಯಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಧ್ವಜಾರೋಹಣ ನಡೆಯಲಿದೆ.
IND vs NZ: ಟೆಸ್ಟ್ ಸರಣಿ ಸೋಲಿನ ಭೀತಿಯಲ್ಲಿ ಟೀಂ ಇಂಡಿಯಾ! ಕಿವೀಸ್ʼಗೆ 301 ರನ್ʼಗಳ ಮುನ್ನಡೆ
ಸರ್ಕಾರದ ಸುತ್ತೋಲೆ ಪ್ರಕಾರ ನವಂಬರ ಒಂದರಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಐದು ಕನ್ನಡ ಹಾಡುಗಳು ಕಡ್ಡಾಯವಾಗಿದೆ.
ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ನಗರದ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಪಾಲ್ಗೊಂಡು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸೋಣ ಎಂದು ರಬಕವಿ ಬನಹಟ್ಟಿ ತಹಸಿಲ್ದಾರ ಗಿರೀಶ್ ಸ್ವಾದಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತಹಶೀಲ್ದಾರ ಕಾರ್ಯಾಲಯದಲ್ಲಿ ನವಂಬರ ಒಂದರಂದು ನಡೆಯುವ ಕನ್ನಡ ರಾಜ್ಯೋತ್ಸವದ ಕುರಿತು ಪೂರ್ವಭಾವಿ ಸಭೆ ನಡೆಯಿತು.
ಇದೇ ಸಂದರ್ಭದಲ್ಲಿ ಸತಿಹಾಳ, ಪ್ರಕಾಶ ಮಠಪತಿ, ಚೇತನ್ ಭಜಂತ್ರಿ, ಪವರ, ಉದ್ದಾರ ಬಸವರಾಜ ಹಳಮನಿ ಪಾಟೀಲ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ